IPL 2025: ಎಲ್ಲಾ ಚೆನ್ನಾಗಿತ್ತು, ಕೊಹ್ಲಿ ಒಂದು ಸಲಹೆ ಕೊಟ್ಟಿದ್ದೇ ಕೊಟ್ಟಿದ್ದು, ಎಡವಟ್ಟಾಯ್ತು: ವಿಡಿಯೋ

Krishnaveni K

ಶನಿವಾರ, 19 ಏಪ್ರಿಲ್ 2025 (09:30 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಯಾಕೋ  ಆರ್ ಸಿಬಿಗೆ ಅದೃಷ್ಟವೇ ಇಲ್ಲ ಎನ್ನಬಹುದು. ನಿನ್ನೆಯ ಪಂದ್ಯದಲ್ಲಂತೂ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ ವಿರಾಟ್ ಕೊಹ್ಲಿ ಬೌಲರ್ ಗೆ ನೀಡಿದ ಸಲಹೆ ಎಡವಟ್ಟು ಮಾಡಿತ್ತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂಜಾಬ್ ಗೆಲ್ಲಲು 96 ರನ್ ಮಾಡಬೇಕಿತ್ತು. ಪಂಜಾಬ್ 8.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತ್ತು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಸುಯಾಶ್ ಶರ್ಮಾ ಬೌಂಡರಿ ನೀಡಿದರು. ತಕ್ಷಣವೇ ಅವರ ಬಳಿ ಹೋಗಿ ಕೊಹ್ಲಿ ಏನೋ ಸಲಹೆ ನೀಡಿದರು.

ಆದರೆ ಆ ಬಾಲ್ ನಲ್ಲಿ ನೇಹಲ್ ವಢೇರಾ ಸಿಕ್ಸರ್ ಸಿಡಿಸಿದರು. ಕೊಹ್ಲಿ ಕೊಟ್ಟ ಸಲಹೆ ಕೈ ಕೊಟ್ಟು ಆರ್ ಸಿಬಿ ಪರಿಸ್ಥಿತಿ ಮತ್ತಷ್ಟು ಹೀನಾಯವಾಯಿತು. ಇದರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಎಂಥಾ ಮುಜುಗರದ ಸನ್ನಿವೇಶ ಎಂದಿದ್ದಾರೆ.

Suyash Sharma conceded a four

-Before Next ball , Virat Kohli went to have some chat with Suyash.

-Result : He conceded a 6 next ball

This is so embarrassing man ????????pic.twitter.com/JDFpdMrypQ

— arku. (@worshipping_45) April 18, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ