ಬಿಡುವು ನೀಡಿದ ಮಳೆರಾಯ, RCB vs PBKS ಪಂದ್ಯಾಟ ಶುರು
ಟಾಸ್ ನಡೆಸುವ ಮುನ್ನವೇ ತುಂತುರು ಮಳೆಯಿಂದ ನಿಗದಿಯಾದ ಸಮಯದಲ್ಲಿ ಪಂದ್ಯಾಟ ಆರಂಭಗೊಳ್ಳಲಿಲ್ಲ. ಉತ್ತಮ ಆರಂಭದೊಂದಿಗೆ ಐಪಿಎಲ್ 18ನೇ ಆವೃತ್ತಿಯನ್ನು ಆರಂಭಿಸಿದ ಆರ್‌ಸಿಬಿ 6 ಪಂದ್ಯಾಟಗಳಲ್ಲಿ ನಾಲ್ಕು ಗೆಲುವು ಸಾಧಿಸಿದೆ.
ತವರಿನಲ್ಲಿ ನಡೆದ ಎರಡು ಪಂದ್ಯಾಟಗಳಲ್ಲೂ ಆರ್‌ಸಿಬಿ ಸೋಲು ಅನುಭವಿಸಿತು. ಅಂತಿಮವಾಗಿ ತವರು ಮೈದಾನದಲ್ಲಿ ತಮ್ಮ ಸೋಲಿನ ಸರಣಿಯನ್ನು ಮುರಿಯಲು ಆಶಿಸುತ್ತಿರುವ ಆರ್‌ಸಿಬಿ, ಇದೀಗ ಗ್ರೌಂಡ್‌ಗೆ ಇಳಿದಿದೆ.