IPL 2025: ಆರ್‌ಸಿಬಿ ಅಭಿಮಾನಿಗಳಿಗೆ ಟೆನ್ಷನ್ ಮೇಲೆ ಟೆನ್ಷನ್‌, ಇನ್ನೂ ಶುರುವಾಗದ ಪಂದ್ಯಾಟ

Sampriya

ಶುಕ್ರವಾರ, 18 ಏಪ್ರಿಲ್ 2025 (19:40 IST)
Photo Credit X
ಬೆಂಗಳೂರು: ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆ) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಪಂದ್ಯ 34 ರ ಟಾಸ್ ಸ್ವಲ್ಪ ತುಂತುರು ಮಳೆಯಿಂದಾಗಿ ವಿಳಂಬವಾಗಿದೆ.

ಕಾತುರದಿಂದ ಕಾಯುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಇದೀಗ ವರುಣನ ಆಗಮನ ನಿರಾಸೆ ಮೂಡಿಸಿದೆ.

ಇದೀಗ ತವರಿನ ಸೋಲು ಮರೆತು ಪಂಜಾಬ್ ಕಿಂಗ್ಸ್ ವಿರುದ್ದ ಗೆಲುವಿನ ಲಯಕ್ಕೆ ಮರಳಲು ಆರ್‌ಸಿಬಿ ಸಜ್ಜಾಗಿದೆ. ಆದರೆ
ಬೆಂಗಳೂರಿನಲ್ಲಿ ಸಂಜೆಯಿಂದ ತುಂತುರು ಮಳೆ ಆರಂಭಗೊಂಡಿದೆ. ಇದರ ಪರಿಣಾಮ ಆರ್‌ಸಿಬಿ ಪಂಜಾಬ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ.

ಕಳೆದ ವಾರದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇನ್ನೂ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇಂದು ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ