ಬೆಂಗಳೂರು: ಐಪಿಎಲ್ 2025 ರ ಹರಾಜು ಪ್ರಕ್ರಿಯೆ ಮುಗಿದಿದ್ದು ಎಲ್ಲಾ ತಂಡಗಳೂ 25 ಸದಸ್ಯರ ಆಟಗಾರರನ್ನು ಹರಾಜಿನ ಮೂಲಕ ಖರೀದಿ ಮಾಡಿಕೊಂಡಿದೆ. ಬೆಂಗಳೂರು ತಂಡಕ್ಕೆ ಈ ಬಾರಿ ವಿರಾಟ್ ಕೊಹ್ಲಿಯೇ ನಾಯಕನಾಗುವುದು ಪಕ್ಕಾ ಆಗಿದೆ.
ಆರ್ ಸಿಬಿ ಈ ಬಾರಿ ಹರಾಜಿನಲ್ಲಿ ಕೆಎಲ್ ರಾಹುಲ್ ರನ್ನು ಖರೀದಿ ಮಾಡಬಹುದು. ಅವರೇ ತಂಡದ ನಾಯಕನಾಗಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಈ ಬಾರಿ ರಾಹುಲ್ ರನ್ನು ಬಿಡಿ, ಯಾವುದೇ ಕ್ಯಾಪ್ಟನ್ ಆಗುವ ಅರ್ಹತೆಯಿರುವ ಆಟಗಾರರನ್ನೂ ಆರ್ ಸಿಬಿ ಖರೀದಿ ಮಾಡಲಿಲ್ಲ.
ಇರುವ ಒಳ್ಳೆಯ ಆಟಗಾರರನ್ನೂ ಬಿಟ್ಟುಕೊಟ್ಟು ಆರ್ ಸಿಬಿ ಟೀಕೆಗೆ ಗುರಿಯಾಗಿದೆ. ಈ ನಡುವೆ ಫಾ ಡು ಪ್ಲೆಸಿಸ್ ರನ್ನು ಕೈ ಬಿಟ್ಟಿರುವುದರಿಂದ ತಂಡಕ್ಕೆ ಈ ಆವೃತ್ತಿಯಲ್ಲಿ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿಯೇ ಮತ್ತೆ ತಂಡದ ನಾಯಕನಾಗುವುದು ಪಕ್ಕಾ ಆಗಿದೆ.
ಆರ್ ಸಿಬಿ ಇದುವರೆಗೆ ಕಪ್ ಗೆದ್ದಿಲ್ಲ. ವಿರಾಟ್ ಕೊಹ್ಲಿ ಇಷ್ಟು ಸುದೀರ್ಘ ವರ್ಷದಿಂದ ತಂಡದಲ್ಲಿದ್ದರೂ ಒಮ್ಮೆಯಾದರೂ ಕಪ್ ಗೆದ್ದೇ ತೀರಬೇಕು ಎಂದು ಪಣ ತೊಟ್ಟಿದ್ದಾರೆ. ಹೀಗಾಗಿ ಮತ್ತೆ ಅವರಿಗೇ ತಂಡದ ನಾಯಕತ್ವ ನೀಡಿ ಚಾಂಪಿಯನ್ ಆಗುವ ಕನಸು ಹೊತ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ.