ಆರ್‌ಸಿಬಿ ಪಾಲಾಗುತ್ತಿದ್ದ ಹಾಗೇ ಕೃಣಾಲ್ ಪಾಂಡ್ಯ ಮಾಡಿದ್ದೇನು

Sampriya

ಸೋಮವಾರ, 25 ನವೆಂಬರ್ 2024 (18:52 IST)
Photo Courtesy X
ಬೆಂಗಳೂರು: ಇಂದು ನಡೆದ ಐಪಿಎಲ್ 2025 ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಲ್‌ರೌಂಡರ್‌ ಕೃಣಾಲ್ ಪಾಂಡ್ಯ ಅವರನ್ನು ₹5.75ಕೋಟಿ ಮೊತ್ತಕ್ಕೆ ಆರ್‌ಸಿಬಿ ಖರೀದಿ ಮಾಡಿದೆ.  ಈ ಹಿಂದಿನ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ಪರ ಆಡಿದ್ದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ 2025ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಲಿದ್ದಾರೆ.

₹ 2 ಕೋಟಿ ಮೂಲ ಬೆಲೆ ಹೊಂದಿದ್ದ ಅವರನ್ನು ಆರ್‌ಸಿಬಿ ₹ 5.75 ಕೋಟಿ ನೀಡಿ ಖರೀದಿಸಿದೆ. ಇವರ ಖರೀದಿಗೆ ರಾಜಸ್ಥಾನ ರಾಯಲ್ಸ್‌ ಭಾರೀ ಪೈಪೋಟಿ ನೀಡಿತ್ತು, ಕೊನೆಗೆ ಆರ್‌ಸಿಬಿ ಪಾಲಾಗಿದ್ದಾರೆ.

ಎಡಗೈ ಆಫ್‌ಸ್ಪಿನ್ನರ್‌ ಆಗಿರುವ ಅವರು, ಬ್ಯಾಟಿಂಗ್‌ನಲ್ಲಿಯೂ ಸ್ಫೋಟಕ ಆಟವಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನೂ ಆರ್‌ಸಿಬಿ ತನ್ನನ್ನು ಖರೀದಿಸಿರುವುದು ಖಚಿತವಾಗುತ್ತಿದ್ದ ಹಾಗೇ ಕೃಣಾಲ್ ಅವರು ತಮ್ಮ ಎಕ್ಸ್‌ ಖಾತೆಯ ಬಯೋ ಬದಲಿಯಿಸಿಕೊಂಡಿದ್ದಾರೆ. ಇದನ್ನು ಆರ್‌ಸಿಬಿ ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್ ಮಾಡಿದೆ.

ತಮ್ಮನ್ನು 'ವೃತ್ತಿಪರ ಕ್ರಿಕೆಟಿಗ' ಎಂದು ಪರಿಚಯಿಸಿಕೊಂಡಿರುವ ಅವರು, 'ಟೀಂ ಇಂಡಿಯಾ, ಆರ್‌ಸಿಬಿ ಮತ್ತು ಬರೋಡಾ' ತಂಡಗಳನ್ನು ಪ್ರತಿನಿಧಿಸುವುದಾಗಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ