ಡೆಲ್ಲಿ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಆರ್ ಸಿಬಿಗೆ ನೀಡಿದ್ದ ಶಾಕ್!
ಈ ಪಂದ್ಯಕ್ಕೂ ಮೊದಲು ಕೊಹ್ಲಿ ಅಸ್ವಸ್ಥರಾಗಿದ್ದರು. ಇದರಿಂದಾಗಿ ಅವರು ನಿರ್ಣಾಯಕ ಪಂದ್ಯದಲ್ಲೇ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ಅಂತಿಮವಾಗಿ ಕೊಹ್ಲಿ ಪಂದ್ಯದ ವೇಳೆ ಸಿದ್ಧರಾಗಿ ಬಂದರು.
ತಮ್ಮ ತವರು ದೆಹಲಿಯಲ್ಲೇ ನಡೆಯುವ ಪಂದ್ಯಕ್ಕೆ ಕೊಹ್ಲಿ ಮೊದಲೇ ಇಲ್ಲಿಗೆ ಆಗಮಿಸಿದ್ದರು. ಆದರೆ ತವರಿಗೆ ಬಂದ ತಕ್ಷಣ ಅವರು ಅಸ್ವಸ್ಥರಾಗಿದ್ದರು. ಇದರಿಂದಾಗಿ ಅಭ್ಯಾಸವನ್ನೂ ತಪ್ಪಿಸಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.