ಏಕಮಾತ್ರ ಟಿ20 ಪಂದ್ಯ ಕ್ರಿಸ್ ಗೇಲ್-ಕೊಹ್ಲಿ ನಡುವಿನ ವಾರ್ ಆಗುತ್ತಾ?

ಭಾನುವಾರ, 9 ಜುಲೈ 2017 (09:03 IST)
ಜಮೈಕಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇಂದು ಏಕಮಾತ್ರ ಟಿ20 ಪಂದ್ಯ ಆಡಲಿದೆ. ಈಗಾಗಲೇ ಏಕದಿನ ಸರಣಿ ಗೆದ್ದಿರುವ ಭಾರತ ತಂಡಕ್ಕೆ ಏಕೈಕ ಟಿ20 ಪಂದ್ಯವೂ ಸುಲಭ ತುತ್ತಾಗಬಹುದು.

 
ಆದರೆ ವಿಂಡೀಸ್ ತಂಡಕ್ಕೆ ಹೊಡೆಬಡಿಯ ಆಟಗಾರ ಕ್ರಿಸ್ ಗೇಲ್ ಆಗಮನವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜತೆಯಾಗಿ ಆಡುವ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಎದುರುಬದುರಾಗಲಿದ್ದಾರೆ. ಇಬ್ಬರೂ ತಮ್ಮ ತಮ್ಮ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ಜತೆಗೆ ನಾಯಕ ಕೊಹ್ಲಿ ಆರಂಭಿಕರಾಗಲಿದ್ದಾರೆ. ಐಪಿಎಲ್ ನಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿಗೆ ಇದು ಹೊಸದೇನಲ್ಲ. ರಿಷಬ್ ಪಂತ್ ಗೆ ಈ ಪಂದ್ಯದಲ್ಲಾದರೂ ಅವಕಾಶ ಸಿಗುತ್ತಾ ನೋಡಬೇಕು. ಎಲ್ಲಕ್ಕಿಂತ ಹೆಚ್ಚು ಬೌಲರ್ ಗಳನ್ನು ಆರಿಸುವುದೇ ಕೊಹ್ಲಿಗೆ ದೊಡ್ಡ ತಲೆ ನೋವು.

ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ರ ಯುವ ಜೋಡಿಯನ್ನು ಕಣಕ್ಕಿಳಿಸಬೇಕೋ ಅಥವಾ ಅನುಭವಿ ಜೋಡಿ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಗೆ ಮಣೆ ಹಾಕಬೇಕೋ ಎಂಬ ಗೊಂದಲ ಕೊಹ್ಲಿಯನ್ನು ಕಾಡಲಿದೆ. ವೇಗಿಗಳಲ್ಲಿ ಭುವನೇಶ್ವರ ಕುಮಾರ್ ಜತೆ ಉಮೇಶ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.

ಪಂದ್ಯ ಸಮಯ: ರಾತ್ರಿ 9.00

ಇದನ್ನೂ ಓದಿ.. ಕೊಬ್ಬು ಕರಗಿಸಲು ಇಲ್ಲಿಗೆ ಕೆಲವು ಸಿಂಪಲ್ ಟಿಪ್ಸ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ