ಮದುವೆ ಮನೆಯಿಂದ ಮೈದಾನಕ್ಕೆ ಬಂದ ಇಶಾಂತ್ ಶರ್ಮಾ

ಶುಕ್ರವಾರ, 16 ಡಿಸೆಂಬರ್ 2016 (09:30 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಈಗಷ್ಟೇ ಆರಂಭವಾಗಿದೆ. ಟೀಂ ಇಂಡಿಯಾ ಟಾಸ್ ಸೋತಿದೆ. ಇಂಗ್ಲೆಂಡ್ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಟೀಂ ಇಂಡಿಯಾದ ಪ್ರಮುಖ ಆಕರ್ಷಣೆ ಮದುಮಗ ಇಶಾಂತ್ ಶರ್ಮಾ.

ಮೊನ್ನೆಯಷ್ಟೇ ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ರನ್ನು ವಿವಾಹವಾಗಿದ್ದ ಇಶಾಂತ್ ಶರ್ಮಾ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿದ್ದಾರೆ. ಗಾಯಗೊಂಡಿರುವ ಭುವನೇಶ್ವರ ಕುಮಾರ್ ಬದಲಿಗೆ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಯಂತ್ ಯಾದವ್ ಬದಲಿಗೆ ಅಮಿತ್ ಮಿಶ್ರಾ ಕಣಕ್ಕಿಳಿದಿದ್ದಾರೆ.

ಅತ್ತ ಇಂಗ್ಲೆಂಡ್ ಕೂಡಾ ಎರಡು ಬದಲಾವಣೆ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಸ್ಟುವರ್ಟ್ ಬ್ರಾಡ್ ವಾಪಸಾಗಿದ್ದಾರೆ. ಕ್ರಿಸ್ ವೋಕ್ಸ್ ಬದಲಿಗೆ ಲಿಯಾಮ್ ಡಾಸನ್ ಆಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ