ಇಶಾಂತ್ ಶರ್ಮಾಗೆ ಗಾಯ: ಮತ್ತೆ ದ್ರಾವಿಡ್ ನೇತೃತ್ವದ ಎನ್ ಸಿಎ ಮೇಲೆ ತೂಗುಗತ್ತಿ
ಆದರೆ ಇದೀಗ ಮತ್ತೆ ಇಶಾಂತ್ ಇದೇ ರೀತಿ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗಿರುವುದರಿಂದ ಎನ್ ಸಿಎ ಕಾರ್ಯವೈಖರಿ ಮೇಲೆ ಪ್ರಶ್ನೆ ಮೂಡಿದೆ. ಎನ್ ಸಿಎಯ ಪ್ರತಿಯೊಂದು ನಿರ್ಧಾರಗಳೂ ದ್ರಾವಿಡ್ ಕೈಯಲ್ಲಿರುವುದರಿಂದ ಇದೀಗ ಈ ವಿವಾದಗಳು ದ್ರಾವಿಡ್ ಗೆ ಕುತ್ತಾಗುವ ಸಂಭವವಿದೆ. ಆಟಗಾರನಾಗಿ, ಕೋಚ್ ಆಗಿ ಅದ್ಭುತವಾಗಿ ಕಾರ್ಯನಿರ್ವಹಣೆ ಮಾಡಿ ಕಳಂಕರಹಿತರಾಗಿದ್ದ ದ್ರಾವಿಡ್ ಗೆ ಈ ವಿವಾದಗಳು ಯಾಕೋ ಉರುಳಾಗುವ ಲಕ್ಷಣ ಕಾಣುತ್ತಿದೆ.