ಅಮೆರಿಕಾ ಕ್ರಿಕೆಟಿಗರಿಗೆ ಕೋಚ್ ಆಗಲಿರುವ ಕರ್ನಾಟಕದ ಜೆ ಅರುಣ್ ಕುಮಾರ್

ಗುರುವಾರ, 30 ಏಪ್ರಿಲ್ 2020 (09:37 IST)
ಬೆಂಗಳೂರು: ಕರ್ನಾಟಕ ರಣಜಿ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ದಿದ್ದ ಮಾಜಿ ಕೋಚ್ ಜೆ. ಅರುಣ್ ಕುಮಾರ್ ಇದೀಗ ಅಮೆರಿಕಾ ಕ್ರಿಕೆಟ್ ಗೆ ಕೋಚ್ ಆಗಲಿದ್ದಾರೆ.


ಕರ್ನಾಟಕ ಪರ ರಣಜಿ ಆಡಿದ್ದಲ್ಲದೆ, ಕೋಚ್ ಆಗಿಯೂ ಚಾಂಪಿಯನ್ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅರುಣ್ ಇನ್ನು ಮುಂದೆ ಅಮೆರಿಕಾ ಕ್ರಿಕೆಟ್ ಕೋಚ್ ಆಗಲಿದ್ದಾರೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಅಮೆರಿಕಾದಲ್ಲಿ ಕ್ರಿಕೆಟ್ ಅಷ್ಟೊಂದು ಜನಪ್ರಿಯವಾಗಿಲ್ಲ. ಹೀಗಾಗಿ ಅಲ್ಲಿನ ಕ್ರಿಕೆಟಿಗರಿಗೆ ತರಬೇತಿ ನೀಡಲು ಅರುಣ್ ಕುಮಾರ್ ರನ್ನು ಎರಡು ವರ್ಷಗಳ ಮಟ್ಟಿಗೆ ಅಲ್ಲಿನ ಮಂಡಳಿ ಒಪ್ಪಂದ ಮಾಡಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ