ಕೊಹ್ಲಿ ವಿಕೆಟ್ ಸಿಗದ ಹತಾಶೆಯಲ್ಲಿ ಜಗಳ ತೆಗೆದಿದ್ದಕ್ಕೆ ಜೇಮ್ಸ್ ಆಂಡರ್ಸನ್ ಗೆ ತಕ್ಕ ಶಾಸ್ತಿ

ಸೋಮವಾರ, 10 ಸೆಪ್ಟಂಬರ್ 2018 (09:05 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಸಿಗದ ಹತಾಶೆಯಲ್ಲಿ ಅಂಪಾಯರ್ ತೀರ್ಪನ್ನು ಪ್ರಶ್ನಿಸಿದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಗೆ ದಂಡ ವಿಧಿಸಲಾಗಿದೆ.

ಕೊಹ್ಲಿ ವಿರುದ್ಧ ಎಲ್ ಬಿಡಬ್ಲ್ಯು ಮನವಿ ಮಾಡಿದ ಆಂಡರ್ಸನ್ ಗೆ ಯಶಸ್ಸು ಸಿಗಲಿಲ್ಲ. ಅಂಪಾಯರ್ ಧರ್ಮಸೇನಾ ಆಂಡರ್ಸನ್ ಮನವಿಯನ್ನು ತಳ್ಳಿ ಹಾಕಿದರು. ಈ ಸಂದರ್ಭದಲ್ಲಿ ಅಂಪಾಯರ್ ಜತೆ ವಾಗ್ವಾದಕ್ಕಿಳದಿದ್ದಕ್ಕೆ ಆಂಡರ್ಸನ್ ಗೆ ಪಂದ್ಯದ ಶೇ.15 ಸಂಭಾವನೆ ದಂಡ ವಿಧಿಸಲಾಗಿದೆ.

ಅಂಪಾಯರ್ ಬಳಿಯಿದ್ದ ತಮ್ಮ ಟೋಪಿ ಮತ್ತು ಜೆರ್ಸಿಯನ್ನು ಕಿತ್ತುಕೊಳ್ಳುವಂತೆ ಪಡೆದಿದ್ದ ಆಂಡರ್ಸನ್ ಬಳಿಕ ಆಕ್ರೋಶಭರಿತರಾಗಿ ಮಾತನಾಡಿದ್ದರು. ಇದಕ್ಕೆ ಶಿಕ್ಷೆ ವಿಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ