ಕೊರೋನಾ ನೆಪದಿಂದ ರಣಜಿಯೇ ಇಲ್ಲ: ಕ್ರಿಕೆಟಿಗ ಉನಾದ್ಕಟ್ ಆಕ್ರೋಶ

ಬುಧವಾರ, 26 ಜನವರಿ 2022 (09:15 IST)
ಮುಂಬೈ: ದೇಶೀಯ ಕ್ರಿಕೆಟಿಗರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಅತ್ಯುತ್ತಮ ವೇದಿಕೆಯೆಂದರೆ ರಣಜಿ ಟ್ರೋಫಿ ಕ್ರಿಕೆಟ್. ಆದರೆ ಕಳೆದ ಎರಡು ಋತುವಿನಿಂದ ಕೊರೋನಾ ನೆಪದಿಂದ ರಣಜಿ ಟ್ರೋಫಿಯನ್ನೇ ರದ್ದು ಮಾಡಲಾಗಿದೆ. ಇದರ ಬಗ್ಗೆ ಇದೀಗ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕಟ್ ಆಕ್ರೋಶ ಹೊರಹಾಕಿದ್ದಾರೆ.

ರಣಜಿ ಟ್ರೋಫಿ ಕ್ರಿಕೆಟ್ ಎನ್ನುವುದು ಯುವ ಆಟಗಾರರಿಗೆ ಕೆಂಪು ಚೆಂಡಿನ ಆಟವನ್ನು ಕರಗತ ಮಾಡಿಕೊಳ್ಳಲು ವೇದಿಕೆ. ಆದರೆ ರಣಜಿ ಟ್ರೋಫಿಯನ್ನು ನಡೆಸದೇ ಇರುವುದರಿಂದ ಆಟಗಾರರಿಗೆ ತಮ್ಮ ಸಾಮರ್ಥ್ಯ, ಪ್ರತಿಭೆ ಸಾಬೀತು ಪಡಿಸಲು ವೇದಿಕೆಯೇ ಇಲ್ಲದಂತಾಗಿದೆ ಎಂದು ಉನಾದ್ಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನಾ ಇದ್ದರೂ ಐಪಿಎಲ್, ಸೀಮಿತ ಓವರ್ ಗಳ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಆದರೆ ರಣಜಿ ಆಯೋಜಿಸದೇ ಇರುವುದು ಟೆಸ್ಟ್ ಕ್ರಿಕೆಟ್ ಗೆ ಹೊಸ ಆಟಗಾರರನ್ನು ಸಿದ್ಧಗೊಳಿಸುವ ವೇದಿಕೆಯನ್ನೇ ಕಸಿದುಕೊಂಡಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ