ಕೆಎಲ್ ರಾಹುಲ್ ಬ್ಯಾಟಿಂಗ್ ಜೂಲಾನ್ ಗೋಸ್ವಾಮಿ ಬೌಲಿಂಗ್!

ಮಂಗಳವಾರ, 19 ಜುಲೈ 2022 (10:10 IST)
ಬೆಂಗಳೂರು: ಎನ್ ಸಿಎನಲ್ಲಿ ಅಭ್ಯಾಸ ನಡೆಸುತ್ತಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗಿ ಜೂಲಾನ್ ಗೋಸ್ವಾಮಿ ಬೌಲಿಂಗ್ ನಡೆಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡು ಕ್ರಿಕೆಟ್ ಕಣಕ್ಕೆ ಮರಳಲು ಕಾಯುತ್ತಿರುವ ಕೆಎಲ್ ರಾಹುಲ್ ಈಗ ಪಿಟ್ನೆಸ್ ಗಾಗಿ ಎನ್ ಸಿಎನಲ್ಲಿ ಬೆವರಿಳಿಸುತ್ತಿದ್ದಾರೆ.

ಇದೀಗ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ರಾಹುಲ್ ಗೆ ಭಾರತ ಮಹಿಳಾ ತಂಡದ ಹಿರಿಯ ವೇಗಿ ಜೂಲಾನ್ ಗೋಸ್ವಾಮಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ