2016ನೇ ಆವೃತ್ತಿಯಲ್ಲಿ ಕೂಡ ಅದೇ 8 ತಂಡಗಳಾದ ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ ಮತ್ತು ರಾಕ್ ಸ್ಟಾರ್ಸ್ ಸೇರಿವೆ.
ಕಿರು ಇತಿಹಾಸದಲ್ಲೇ ಕೆಪಿಎಲ್ ದೂರದ ಹಳ್ಳಿಗಳಿಂದ ಭರವಸೆಯ ಕ್ರಿಕೆಟರುಗಳನ್ನು ಬೆಳಕಿಗೆ ತಂದಿದೆ. ಯುವ ಪ್ರತಿಭಾಶಾಲಿ ಕ್ರಿಕೆಟರುಗಳಿಗಾಗಿ ಐಪಿಎಲ್ ಶೋಧ ನಡೆಸುತ್ತಿದ್ದು ಕೆಪಿಎಲ್‌ಗೂ ಕೂಡ ಲಗ್ಗೆ ಹಾಕಿದೆ. ಕೆಸಿ ಕಾರಿಯಪ್ಪ, ಜಗದೀಶ್ ಸುಚಿತ್ ಮತ್ತು ಕೌಶಿಕ್ ಕೆಪಿಲ್‌ನಲ್ಲಿನ ಯಶಸ್ಸಿನ ಮೂಲಕ ಐಪಿಎಲ್ ಗುತ್ತಿಗೆಗಳನ್ನು ಪಡೆದಿದ್ದಾರೆ.