ರಣಜಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ರೆಡಿ: ಆದರೆ ಒಂದು ಬ್ಯಾಡ್ ನ್ಯೂಸ್!

ಮಂಗಳವಾರ, 15 ಜನವರಿ 2019 (09:08 IST)
ಬೆಂಗಳೂರು: ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ ವಿರುದ್ಧ ಕರ್ನಾಟಕದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದೆ.


ಆದರೆ ಕರ್ನಾಟಕ ತಂಡಕ್ಕೆ ಪ್ರಮುಖ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಅನುಪಸ್ಥಿತಿ ಕಾಡಲಿದೆ. ಗಾಯಗೊಂಡಿರುವ ಮಯಾಂಕ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೂ ಆಯ್ಕೆಯಾಗಲಿಲ್ಲ. ಮಯಾಂಕ್ ಅನುಪಸ್ಥಿತಿ ಕರ್ನಾಟಕವನ್ನು ಕಾಡಲಿದೆ.

ಇನ್ನೊಂದೆಡೆ ಗಾಯದಿಂದಾಗಿ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ತಂಡಕ್ಕೆ ಮರಳಿರುವುದು ಬಲ ನೀಡಲಿದೆ. ಉಳಿದಂತೆ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದು, ಶ್ರೇಯಸ್ ಗೋಪಾಲ್ ಉಪನಾಯಕರಾಗಲಿದ್ದಾರೆ.

ಕರ್ನಾಟಕ ತಂಡ ಇಂತಿದೆ: ವಿನಯ್ ಕುಮಾರ್, ಮನೀಶ್ ಪಾಂಡೆ, ಕೆ ಗೌತಮ್,  ಕೆವಿ ಸಿದ್ಧಾರ್ಥ್, ದೇಗಾ ನಿಶ್ಚಲ್, ಶ್ರೇಯಸ್ ಗೋಪಾಲ್, ಪ್ರಸೀದ್ ಕೃಷ್ಣ, ಪವನ್ ದೇಶಪಾಂಡೆ, ಸುಚಿತ್ ಜಗದೀಶ, ರವಿಕಾಂತ್ ಸಮರ್ಥ್, ಕರುಣ್ ನಾಯರ್, ರೋಹಿತ್ ಮೋರೆ, ಅಭಿಮನ್ಯು ಮಿಥುನ್, ಶರತ್ ಶ್ರೀನಿವಾಸ್, ಶರತ್ ಬಿಆರ್.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ