ಪತ್ನಿ ಅನುಷ್ಕಾ ಜತೆ ಹೊರಗಡೆ ಸುತ್ತಾಡಿದ್ದಕ್ಕೆ ಟ್ರೋಲ್ ಗೊಳಗಾದ ವಿರಾಟ್ ಕೊಹ್ಲಿ
ಸೋಮವಾರ, 14 ಜನವರಿ 2019 (11:00 IST)
ಸಿಡ್ನಿ: ಮೊದಲ ಏಕದಿನ ಪಂದ್ಯ ಸೋತ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ ಪತ್ನಿ ಅನುಷ್ಕಾ ಜತೆ ಸುತ್ತಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇನ್ನು ಎರಡು ಏಕದಿನ ಪಂದ್ಯಗಳಿದ್ದು, ಸರಣಿ ಗೆಲ್ಲಬೇಕಾದರೆ ಇವೆರಡನ್ನೂ ಗೆಲ್ಲಲೇಬೇಕಿದೆ. ಆದರೆ ಅಭ್ಯಾಸ ನಡೆಸುವುದು ಬಿಟ್ಟು ಆಸ್ಟ್ರೇಲಿಯಾದ ಪ್ರವಾಸಿ ತಾಣಗಳಲ್ಲಿ ಸುತ್ತಾಡಿಕೊಂಡು ಪತ್ನಿ ಜತೆ ರೊಮ್ಯಾಂಟಿಕ್ ಫೋಟೋವೊಂದನ್ನು ವಿರಾಟ್ ಟ್ವಿಟರ್ ನಲ್ಲಿ ಪ್ರಕಟಿಸಿರುವುದನ್ನು ನೋಡಿ ಟ್ವಿಟರಿಗರು ಗರಂ ಆಗಿದ್ದಾರೆ.
ಹೀಗೆ ಸುತ್ತಾಡುವುದು ಬಿಟ್ಟು ಕ್ರಿಕೆಟ್ ಬಗ್ಗೆ ಗಮನ ಕೊಡಿ. ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದರತ್ತ ನೋಡಿ ಎಂದು ಟ್ರೋಲ್ ಮಾಡಿದ್ದಾರೆ. ವೈಯಕ್ತಿಕವಾಗಿಯೂ ಕೊಹ್ಲಿ ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದನ್ನೂ ಟ್ವಿಟರಿಗರು ಬೊಟ್ಟು ಮಾಡಿ ತೋರಿಸಿದ್ದು, ಪ್ರದರ್ಶನ ಸುಧಾರಿಸಲು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ