ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ: ಸಚಿನ್ ದಾಖಲೆ ಮುರಿದ ಮಯಾಂಕ್

ಮಂಗಳವಾರ, 27 ಫೆಬ್ರವರಿ 2018 (16:51 IST)
ದೆಹಲಿ: ಸೌರಾಷ್ಟ್ರ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಕರ್ನಾಟಕ 41 ರನ್ ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.
 

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಆರಂಭಿಕ ಕುಸಿತ ಕಂಡರೂ ನಂತರ ಮಯಾಂಕ್ ಅಗರ್ವಾಲ್ ಅವರ 90 ರನ್ ಮತ್ತ ರವಿಕಾಂತ್ ಸಮರ್ಥ್ ಅವರ 48 ರನ್ ಗಳ ಇನಿಂಗ್ಸ್ ನಿಂದ ಚೇತರಿಸಿಕೊಂಡಿತು. ಇದರಿಂದಾಗಿ ರಾಜ್ಯದ ತಂಡ 45.5 ಓವರ್ ಗಳಲ್ಲಿ 253 ರ ನ್ ಗಳಿಗೆ ಆಲೌಟ್ ಆಯಿತು. ರಣಜಿಯ ಭರ್ಜರಿ ಫಾರ್ಮ್ ಮುಂದುವರಿಸಿದ ಮಯಾಂಕ್ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿದರು.

ಎಲ್ಲಾ ಮಾದರಿಯ ದೇಶೀಯ ಟೂರ್ನಿಯಲ್ಲಿ ಒಂದೇ ಋತುವಿನಲ್ಲಿ 700 ರನ್ ಗಳಿಸುವ ಮೂಲಕ ತೆಂಡುಲ್ಕರ್ ದಾಖಲೆ ಮುರಿದರು. ಕರ್ನಾಟಕಕ್ಕೆ ದಿಟ್ಟ ಹೋರಾಟ ನೀಡಿದ ಸೌರಾಷ್ಟ್ರದ ಚೇತೇಶ್ವರ ಪೂಜಾರ 94 ರನ್ ಗಳಿಸಿ ಭೀತಿ ಹುಟ್ಟಿಸಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗದೇ ಸೌರಾಷ್ಟ್ರ ಸೋತಿತು. ಕರ್ನಾಟಕ ಪರ ಯುವ ಬೌಲರ್ ಗಳಾದ ಪ್ರದೀಶ್ ಕೃಷ್ಣ 3 ಮತ್ತು ಪ್ರದೀಪ್ ಟಿ 2 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ