ಕನ್ನಡಿಗ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಆಯ್ಕೆಗಾರರ ಕಣ್ಣಿಗೆ ಬೀಳಲಿಲ್ಲವೇ?!

ಸೋಮವಾರ, 26 ಫೆಬ್ರವರಿ 2018 (08:42 IST)
ಮುಂಬೈ: ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡವನ್ನೊಳಗೊಂಡ ತ್ರಿಕೋನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಸಾಕಷ್ಟು ಯುವ ಪ್ರತಿಭೆಗಳಿಗೆ ಆಯ್ಕೆಗಾರರು ಅವಕಾಶ ನೀಡಿದ್ದಾರೆ.
 

ತಮಿಳುನಾಡಿನ ವಿಜಯ್ ಶಂಕರ್,  ಡೆಲ್ಲಿ ಡ್ಯಾಶರ್ ರಿಷಬ್ ಪಂತ್, ದೀಪಕ್ ಹೂಡಾ ಇತ್ಯಾದಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಬಿಸಿಸಿಐ ಒಳ್ಳೆಯ ಕೆಲಸವನ್ನೇ ಮಾಡಿದೆ.

ಸಾಮಾನ್ಯವಾಗಿ ರಣಜಿ ಸೇರಿದಂತೆ ದೇಶೀಯ ಟೂರ್ನಿಯಲ್ಲಿ ಗಮನ ಸೆಳೆದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗುತ್ತದೆ. ಆದರೆ ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್ ರನ್ನು ಅದ್ಭುತ ಪ್ರದರ್ಶನದ ಹೊರತಾಗಿಯೂ ಆಯ್ಕೆಗಾರರು ಕಡೆಗಣಿಸಿದ್ದಾರೆ.

ಈ ವರ್ಷ ರಣಜಿ, ಇದೀಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲೂ ಮಯಾಂಕ್ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೂ ಟೀಂ ಇಂಡಿಯಾಕ್ಕೆ ಅವರನ್ನು ಆಯ್ಕೆ ಮಾಡಿಯೇ ಇಲ್ಲ. ನಮ್ಮ ದೇಶದ ಯಾವುದೇ ರಾಜ್ಯಕ್ಕೆ ಸೇರಿದ ಆಟಗಾರರೂ ಒಂದೇ ಎಂದಾದರೂ ಮಯಾಂಕ್ ಫಾರ್ಮ್ ನೋಡಿಯಾದರೂ ಆಯ್ಕೆಗಾರರು ಈಗ ಅವಕಾಶ ನೀಡಬಹುದಿತ್ತಲ್ಲವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ