ಕೊಹ್ಲಿಯನ್ನು ರಿಪ್ಲೇಸ್ ಮಾಡ್ತಾರಂತೆ ಕೇದಾರ್ ಜಾದವ್! ಟ್ರೋಲ್ ಮಾಡಿದ ನೆಟ್ಟಿಗರು

ಸೋಮವಾರ, 26 ಜೂನ್ 2023 (08:50 IST)

ಮುಂಬೈ: ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಗನಾಗಿದ್ದ ಕೇದಾರ್ ಜಾದವ್ ಗೆ ಈಗ ಅವಕಾಶವೇ ಸಿಗುತ್ತಿಲ್ಲ.

ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ಕೇದಾರ್ ಜಾದವ್ ಮತ್ತೆ ಟೀಂ ಇಂಡಿಯಾಗೆ ಮರಳಲು ಪರಿಶ್ರಮಪಡುತ್ತಿದ್ದಾರಂತೆ. ಇದೀಗ ಅವರು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಂತೆ.

 ನನಗೆ ಮೂರನೇ ಕ್ರಮಾಂಕ ಬೇಕು. ಪ್ರತೀ ಪಂದ್ಯದಲ್ಲೂ ಆಡುವುದಷ್ಟೇ ನನ್ನ ಕೆಲಸ. ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಪ್ರಯತ್ನಪಡುತ್ತಿದ್ದೇನೆ ಎಂದಿದ್ದಾರೆ. ಜಾಧವ್ ಹೇಳಿಕೆಗೆ ನೆಟ್ಟಿಗರು ಟ್ರೋಲ್ ಮಾಡಿದ್ದು, ಕನಸು ಕಾಣುವುದಕ್ಕೂ ಮಿತಿ ಬೇಡ್ವಾ? ಕೊಹ್ಲಿಯ ಸ್ಥಾನವನ್ನು ಜಾಧವ್ ತುಂಬಲು ಸಾಧ‍್ಯವೇ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ