ರಾತ್ರಿಯಿಡೀ ಪಾರ್ಟಿ ಮಾಡಿ ಹಗಲು ದ್ವಿಶತಕ ಸಿಡಿಸಿದ್ದ ಕೊಹ್ಲಿ!

ಭಾನುವಾರ, 25 ಜೂನ್ 2023 (09:23 IST)
Photo Courtesy: Twitter
ನವದೆಹಲಿ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ವೇಗಿ ಇಶಾಂತ್ ಶರ್ಮಾ ಹೊರ ಹಾಕಿದ್ದಾರೆ.

ಇಶಾಂತ್ ಡೆಲ್ಲಿ ತಂಡದಲ್ಲೂ ಕೊಹ್ಲಿ ಜೊತೆ ಆಡಿದ ಅನುಭವ ಹೊಂದಿದ್ದಾರೆ. ಅಂಡರ್ 17 ತಂಡದಲ್ಲಿ ಜೊತೆಯಾಗಿ ಆಡುತ್ತಾ ಬಂದವರು ಬಳಿಕ ಟೀಂ ಇಂಡಿಯಾದಲ್ಲೂ ಜೊತೆಯಾಗಿದ್ದರು.

ಇದೀಗ ಡೆಲ್ಲಿ ಪರ ಆಡುತ್ತಿದ್ದಾಗ ಕೊಹ್ಲಿ ರಾತ್ರಿಯಿಡೀ ಪಾರ್ಟಿ ಮಾಡಿ ಬೆಳಿಗ್ಗೆ 250 ರನ್ ಹೊಡೆದಿದ್ದರು ಎಂಬುದಾಗಿ ಇಶಾಂತ್ ಹೇಳಿದ್ದಾರೆ. ಕೊಹ್ಲಿ ವೃತ್ತಿ ಜೀವನದ ಎಲ್ಲಾ ಕ್ಷಣಗಳನ್ನು ನಾನು ನೋಡಿದ್ದೇನೆ. ಅವರ ಪಾರ್ಟಿ, ಟ್ಯಾಟೂ ಮೇಲಿನ ಹುಚ್ಚು ಪ್ರೀತಿ, ಫಿಟ್ನೆಸ್ ಬಗ್ಗೆ ಒಲವು ಎಲ್ಲವನ್ನೂ ನೋಡಿದ್ದೇನೆ. ಡೆಲ್ಲಿ ಪರ ಅಂಡರ್ 19 ಕ್ರಿಕೆಟ್ ಆಡುತ್ತಿದ್ದಾಗ ಕೋಲ್ಕೊತ್ತಾದಲ್ಲಿ ಒಮ್ಮೆ ರಾತ್ರಿಯಿಡೀ ಪಾರ್ಟಿ ಮಾಡಿ ಬೆಳಿಗ್ಗೆ 250 ರನ್ ಹೊಡೆದಿದ್ದರು’ ಎಂದಿದ್ದಾರೆ ಇಶಾಂತ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ