ವಿದೇಶ ಪ್ರವಾಸದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೋಜು ಮಸ್ತಿ
ಅಫ್ಘಾನಿಸ್ತಾನ ವಿರುದ್ಧದ ಕಿರು ಸರಣಿ ರದ್ದುಗೊಂಡಿದ್ದರಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈ ಸುದೀರ್ಘ ಬಿಡುವು ಸಿಕ್ಕಿದೆ. ಇದನ್ನು ಕ್ರಿಕೆಟಿಗರು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಕ್ರಿಕೆಟಿಗರು ವಿದೇಶ ಪ್ರವಾಸದಲ್ಲಿದ್ದಾರೆ.
ನಾಯಕ ರೋಹಿತ್ ಶರ್ಮಾ ಪ್ಯಾರಿಸ್ ನಲ್ಲಿ, ಹಾರ್ದಿಕ್ ಪಾಂಡ್ಯ ಥೈಲ್ಯಾಂಡ್ ನಲ್ಲಿ, ಶುಬ್ಮನ್ ಗಿಲ್ ಫ್ರಾನ್ಸ್, ವಿರಾಟ್ ಕೊಹ್ಲಿ ಲಂಡನ್ ನಲ್ಲಿ ಫ್ಯಾಮಿಲಿ ಸಮೇತ ಕಾಲ ಕಳೆಯುತ್ತಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರಿಗೆ ಕುಟುಂಬದ ಜೊತೆ ಕಾಲ ಕಳೆಯಲು ಅವಕಾಶವೇ ಸಿಗುವುದಿಲ್ಲ. ಇದೀಗ ಸಿಕ್ಕ ಸಮಯವನ್ನು ಚೆನ್ನಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.