ಶಾಕಿಂಗ್! ಕೆಎಲ್ ರಾಹುಲ್ ಭವಿಷ್ಯಕ್ಕೇ ಕುತ್ತು!
ಕರ್ನಾಟಕ ಮೂಲದ ಬ್ಯಾಟ್ಸ್ ಮನ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕೇವಲ 4 ರನ್ ಗಳಿಗೆ ಔಟಾಗುವುದರೊಂದಿಗೆ ಅವರ ಆರಂಭಿಕ ಸ್ಥಾನಕ್ಕೆ ಕುತ್ತುಬರುವ ನಿರೀಕ್ಷೆಯಿದೆ.
ವಿಂಡೀಸ್ ನ ದುರ್ಬಲ ಬೌಲಿಂಗ್ ದಾಳಿಯನ್ನು ಪೃಥ್ವಿ ಶಾರಂತಹ ಯುವ ಆಟಗಾರರೂ ಧೂಳೀಪಟ ಮಾಡುತ್ತಿರುವಾಗ ಕೆಎಲ್ ರಾಹುಲ್ ಮಾತ್ರ ತಡಕಾಡುತ್ತಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಇಂದು ದ್ವಿತೀಯ ದಿನವಾಗಿದ್ದು ಭಾರತ ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ. ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ ಇಂದೂ ಕೂಡಾ ಅದೇ ಫಾರ್ಮ್ ಮುಂದುವರಿಸಿದ್ದು 52 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.