ನವ ವಿವಾಹಿತ ಕೆಎಲ್ ರಾಹುಲ್ ಗೆ ಸಿಕ್ತು ಕೊಹ್ಲಿ, ಧೋನಿಯಿಂದ ದುಬಾರಿ ಉಡುಗೊರೆ

ಗುರುವಾರ, 26 ಜನವರಿ 2023 (07:10 IST)
Photo Courtesy: Twitter
ಮುಂಬೈ: ಮೊನ್ನೆಯಷ್ಟೇ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಜೊತೆ ವಿವಾಹವಾದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಸ್ನೇಹಿತ ಕ್ರಿಕೆಟಿಗರಿಂದ ಭರ್ಜರಿ ಉಡುಗೊರೆಯೇ ಬಂದಿದೆಯಂತೆ.

ಕೆಎಲ್ ಮದುವೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಹ್ವಾನವಿದ್ದರೂ ಕ್ರಿಕೆಟ್ ಪಂದ್ಯವಿದ್ದುದರಿಂದ ಯಾರೂ ಆಗಮಿಸಿರಲಿಲ್ಲ.

ಹಾಗಿದ್ದರೂ ತಮ್ಮ ಸ್ನೇಹಿತನ ಮದುವೆಗೆ ಟೀಂ ಇಂಡಿಯಾ ಕ್ರಿಕೆಟಿಗರು ದುಬಾರಿ ಉಡುಗೊರೆಯನ್ನೇ ನೀಡಿದ್ದಾರಂತೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ 2 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ನೀಡಿದ್ದಾರಂತೆ. ಧೋನಿ ಕೂಡಾ ಐಪಿಎಲ್ ತಯಾರಿಯಲ್ಲಿರುವುದರಿಂದ ಮದುವೆಗೆ ಆಗಮಿಸಿರಲಿಲ್ಲ. ಆದರೆ ರಾಹುಲ್ ಗಾಗಿ 80 ಲಕ್ಷ ರೂ. ಬೆಲೆ ಬಾಳುವ ದುಬಾರಿ ಬೈಕ್ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ