ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ ತಪ್ಪಿಗೆ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪ್ರಕರಣಕ್ಕೆ ಸದ್ಯಕ್ಕೆ ಮುಕ್ತಿ ಸಿಗುವ ಹಾಗೆ ತೋರುತ್ತಿಲ್ಲ.
ಇಬ್ಬರು ಕ್ರಿಕೆಟಿಗರ ವಿಚಾರಣೆಗೆ ಸ್ವತಂತ್ರ ತನಿಖಾಧಿಕಾರಿ ನೇಮಕವಾಗಬೇಕಿತ್ತು. ಆದರೆ ಗೋಪಾಲ್ ಸುಬ್ರಹ್ಮಣಿಯಮ್ ಈ ಪ್ರಕರಣದ ವಿಚಾರಣಾಧಿಕಾರಿಯಾಗುವುದರಿಂದ ಹಿಂದೆ ಸರಿದಿರುವುದರಿಂದ ಸುಪ್ರೀಂಕೋರ್ಟ್ ಹೊಸ ರಾಯಭಾರಿಯನ್ನು ನೇಮಕ ಮಾಡಬೇಕಿದೆ.
ಹೀಗಾಗಿ ಅಲ್ಲಿಯವರೆಗೆ ರಾಹುಲ್ ಮತ್ತು ಪಾಂಡ್ಯ ಪ್ರಕರಣ ವಿಚಾರಣೆ ನಡೆಯದು. ಇದರಿಂದಾಗಿ ಇಬ್ಬರು ಕ್ರಿಕೆಟಿಗರ ಭವಿಷ್ಯ ಸಂದಿಗ್ಧಕ್ಕೀಡಾಗಿದೆ. ಸದ್ಯಕ್ಕೆ ಇಬ್ಬರೂ ಕ್ರಿಕೆಟಿಗರ ಮೇಲಿನ ನಿಷೇಧ ತೆರವಾಗುವ ಸೂಚನೆ ಸಿಗುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ