ನನ್ನ ಕೆಣಕಿದರೆ ಸುಮ್ನಿರೋಲ್ಲ: ರಿಷಬ್ ಪಂತ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಷಬ್ ‘ನನ್ನ ವ್ಯಕ್ತಿತ್ವವೇ ಹಾಗೆ. ಯಾರಾದರೂ ಪ್ರಚೋದಿಸಿದರೆ ಅವರಿಗೆ ತಿರುಗೇಟು ಕೊಡುತ್ತೇನೆ. ನನ್ನ ತಂಡಕ್ಕಾಗಿ ಆಡುವ ಜವಾಬ್ಧಾರಿ ನನ್ನ ಮೇಲಿದೆ. ಆದರೆ ನನಗೆ ನೀತಿ ನಿಯಮ ಗೊತ್ತು. ನಾನು ಮೌಲ್ಯಗಳಿಗೆ ಬೆಲೆ ಕೊಡುತ್ತೇನೆ. ನಾನು ಸ್ಲೆಡ್ಜಿಂಗ್ ಮಾಡಿದ್ದು ಜನರಿಗೂ ಇಷ್ಟವಾಯಿತು. ನನ್ನ ಅಮ್ಮ, ಸಹೋದರಿ ಕೂಡಾ ಇಷ್ಟಪಟ್ಟರು’ ಎಂದು ರಿಷಬ್ ನಗುತ್ತಲೇ ಹೇಳಿಕೊಂಡಿದ್ದಾರೆ.