ಕೆಎಲ್ ರಾಹುಲ್ ಗಾಯ ವಾಸಿಯಾಗದಿದ್ದರೆ ಟೀಂ ಇಂಡಿಯಾಗೆ ಇವರೇ ಓಪನರ್

Krishnaveni K

ಶನಿವಾರ, 16 ನವೆಂಬರ್ 2024 (10:59 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಪ್ರಾಕ್ಟೀಸ್ ಮಾಡುವಾಗ ಗಾಯಗೊಂಡಿದ್ದಾರೆ. ಒಂದು ವೇಳೆ ಅವರು ಲಭ್ಯರಲ್ಲದೇ ಹೋದರೆ ಟೀಂ ಇಂಡಿಯಾ ಆರಂಭಿಕ ಯಾರಾಗಲಿದ್ದಾರೆ ನೋಡೋಣ.

ಮೊದಲ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಪರ್ತ್ ನಲ್ಲಿ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ. ನಿನ್ನೆ ಬ್ಯಾಟಿಂಗ್ ಅಭ್ಯಾಸ ನಡೆಸುವಾಗ ಬೌನ್ಸರ್ ಎಸೆತವೊಂದು ಕೆಎಲ್ ರಾಹುಲ್ ಮೊಣಕೈಗೆ ತಗುಲಿದೆ. ಪರಿಣಾಮ ಅವರು ಅಭ್ಯಾಸ ಮುಂದುವರಿಸಲಾಗದೇ ಮೈದಾನ ತೊರೆದಿದ್ದಾರೆ.

ಅವರ ಗಾಯದ ತೀವ್ರತೆ ಎಷ್ಟಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಆದರೆ ರಾಹುಲ್ ಗಾಯದಿಂದ ಚೇತರಿಸಿಕೊಳ್ಳದೇ ಇದ್ದರೆ ಅಭಿಮನ್ಯು ಈಶ್ವರನ್ ಅಥವಾ ಶುಬ್ಮನ್ ಗಿಲ್ ಓಪನರ್ ಆಗಿ ಕಣಕ್ಕಿಳಿಯಬಹುದು.

ರೋಹಿತ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತ ಶುಬ್ಮನ್ ಗಿಲ್ ಗೂ ಓಪನರ್ ಆಗಿ ಕಣಕ್ಕಿಳಿದು ಅನುಭವವಿದೆ. ಹೀಗಾಗಿ ಇಬ್ಬರಲ್ಲಿ ಒಬ್ಬರು ಆರಂಭಿಕರಾಗಬಹುದು. ಆದರೆ ಪರ್ತ್ ಪಂದ್ಯಕ್ಕೆ ಇನ್ನೂ ವಾರವಿರುವ ಕಾರಣ ಅಷ್ಟರಲ್ಲಿ ರಾಹುಲ್ ಫಿಟ್ ಆಗುವ ನಿರೀಕ್ಷೆಯೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ