ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಗೂ ಕೆಎಲ್ ರಾಹುಲ್ ಅಲಭ್ಯ?

ಬುಧವಾರ, 15 ಜೂನ್ 2022 (10:50 IST)
ಮುಂಬೈ: ಗಾಯದಿಂದಾಗಿ ದ.ಆಫ್ರಿಕಾ ವಿರುದ್ಧದ 2ಟಿ0 ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೂ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ.

ಸದ್ಯಕ್ಕೆ ರಾಹುಲ್ ಬಿಸಿಸಿಐ ನಿಯಮದಂತೆ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಚೇತರಿಸಿಕೊಂಡರೆ ಜೂನ್ 19 ರಂದು ಇಂಗ್ಲೆಂಡ್ ಗೆ ಪ್ರಯಾಣಿಸಬೇಕಾಗುತ್ತದೆ.

ಸದ್ಯಕ್ಕೆ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಾರೆ ಎಂಬ ಮಾಹಿತಿಯಿದೆ. ಜೂನ್ 19 ರ ಮೊದಲು ಅವರು ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಒಂದು ವೇಳೆ ವಿಫಲರಾದರೆ ಇಂಗ್ಲೆಂಡ್ ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ