ಜಿಂಬಾಬ್ವೆಯಲ್ಲಿ ದಾಖಲೆ ಮಾಡಲು ಸಜ್ಜಾದ ಶಿಖರ್ ಧವನ್, ಕೆಎಲ್ ರಾಹುಲ್
ಆಗಸ್ಟ್ 18 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಕೆಎಲ್ ರಾಹುಲ್ ಇನ್ನು 7 ಕ್ಯಾಚ್ ಪಡೆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಕ್ಯಾಚ್ ಪಡೆದ ದಾಖಲೆ ಮಾಡಲಿದ್ದಾರೆ. ಅಲ್ಲದೆ ಕೆಎಲ್ ರಾಹುಲ್ ಇನ್ನು 366 ರನ್ ಗಳಿಸಿದರೆ ಏಕದಿನ ಪಂದ್ಯಗಳಲ್ಲಿ 2000 ರನ್ ಪೂರೈಸಲಿದ್ದಾರೆ.
ಇತ್ತ ಶಿಖರ್ ಧವನ್ ಗೂ ದಾಖಲೆ ಮಾಡುವ ಅವಕಾಶವಿದೆ. ಧವನ್ ಇನ್ನು 433 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ಸಾವಿರ ರನ್ ಪೂರೈಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಲ್ಲದೆ 202 ರನ್ ಗಳಿಸಿದಾಗ ಹರಾರೆಯಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಲಿದ್ದಾರೆ.