ಏಷ್ಯಾ ಕಪ್ ನಲ್ಲಿ ಮೊದಲ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅಲಭ್ಯ
ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಏಷ್ಯಾ ಕಪ್ ತಂಡಕ್ಕೆ ಆಯ್ಕೆಯಾಗಿರುವ ರಾಹುಲ್ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಹಾಗೂ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಆಲೂರಿನಲ್ಲಿ ಏಷ್ಯಾ ಕಪ್ ಸಿದ್ಧತಾ ಶಿಬಿರದಲ್ಲಿ ಭಾಗಿಯಾಗಿದ್ದ ರಾಹುಲ್ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಹಾಗಿದ್ದರೂ ಲಂಕಾಗೆ ತೆರಳಿದ ಮೇಲೆ ಮತ್ತೊಮ್ಮೆ ಫಿಟ್ನೆಸ್ ಟೆಸ್ಟ್ ಗೊಳಗಾಗಲಿದ್ದಾರೆ. ಅದಾದ ಬಳಿಕವಷ್ಟೇ ಅವರು ಲಭ್ಯರಾಗಲಿದ್ದಾರೆ.