ಈ ಕಾರಣಕ್ಕೆ ಇಂಗ್ಲೆಂಡ್ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಮಾಡಲ್ಲ ಕೆಎಲ್ ರಾಹುಲ್

Krishnaveni K

ಸೋಮವಾರ, 15 ಜನವರಿ 2024 (10:17 IST)
ಮುಂಬೈ: ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ವಿಕೆಟ್‍ ಕೀಪಿಂಗ್ ಮಾಡುತ್ತಿಲ್ಲ.

ಅವರನ್ನು ವಿಕೆಟ್ ಕೀಪರ್ ಬ್ಯಾಟಿಗನಾಗಿ ತಂಡಕ್ಕೆ ಆಯ್ಕೆ ಮಾಡಿದ್ದರೂ ಅವರು ಕೇವಲ ಬ್ಯಾಟಿಂಗ್ ಕಡೆಗೆ ಗಮನ ಕೊಡಲಿದ್ದಾರೆ. ಅವರ ಬದಲಾಗಿ ಕೆ.ಎಸ್.ಭರತ್ ವಿಕೆಟ್ ಕೀಪಿಂಗ್ ಮಾಡುವ ಸಾಧ‍್ಯತೆ ಹೆಚ್ಚಿದೆ.

ಇದಕ್ಕೆ ಕಾರಣ ಗಾಯದ ಭಯ. ಟೆಸ್ಟ್ ಸರಣಿಯಲ್ಲಿ ಎರಡರಿಂದ ಮೂರು ದಿನ ವಿಕೆಟ್ ಕೀಪಿಂಗ್ ಮಾಡುವುದು ಸುಲಭದ ಮಾತಲ್ಲ. ಇದಕ್ಕೆ ವಿಕೆಟ್ ಕೀಪಿಂಗ್ ಪರಿಣಿತ ಆಟಗಾರನೇ ಆಗಿರಬೇಕು. ಆದರೆ ರಾಹುಲ್ ಪಾರ್ಟ್ ಟೈಂ ಆಗಿ ಕೀಪಿಂಗ್ ಮಾಡುತ್ತಾರೆ.

ಸೀಮಿತ ಓವರ್ ಗಳಲ್ಲೇನೋ ರಾಹುಲ್ ಕೀಪಿಂಗ್ ಮಾಡಿ ತಂಡದ ಕಾಂಬಿನೇಷನ್ ಹೊಂದಿಸಲು ಸಹಾಯ ಮಾಡುತ್ತಾರೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲೂ ಇದೇ ರೀತಿ ಮಾಡಿದರೆ ಅವರಿಗೆ ಗಾಯವಾಗುವ ಅಪಾಯವಿದೆ. ಮುಂಬರುವ ಐಪಿಎಲ್ ಮತ್ತು ಟಿ20 ವಿಶ್ವಕಪ್ ದೃಷ್ಟಿಯಿಂದ ರಾಹುಲ್ ಫಿಟ್ ಆಗಿರುವುದು ತಂಡಕ್ಕೆ ಅನಿವಾರ್ಯ. ಹೀಗಾಗಿ ಇಂಗ್ಲೆಂಡ್ ಸರಣಿಯಲ್ಲಿ ರಾಹುಲ್ ಕೇವಲ ಬ್ಯಾಟಿಗನಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ