ಟೆಸ್ಟ್ ನಾಯಕತ್ವವನ್ನೂ ತ್ಯಜಿಸುತ್ತಾರಾ ಕೊಹ್ಲಿ?
ಟಿ20 ನಾಯಕತ್ವದಿಂದ ಕೊಹ್ಲಿ ತಾವಾಗಿಯೇ ಕೆಳಗಿಳಿದಿದ್ದರು. ಆದರೆ ಏಕದಿನ ನಾಯಕತ್ವವನ್ನು ಅವರಿಂದ ಕಸಿದುಕೊಳ್ಳಲಾಯಿತು. ಇದು ಅವರಲ್ಲಿ ಅಸಮಾಧಾನವುಂಟುಮಾಡಿದೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಅವರು ಮುಂದೆ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿದರೂ ಅಚ್ಚರಿಯಿಲ್ಲ. ಸದ್ಯಕ್ಕೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಅವರೇ ನಾಯಕರಾಗಿದ್ದು, ಒಂದು ವೇಳೆ ಈ ಸರಣಿಯಲ್ಲೂ ರನ್ ಗಳಿಸಲು ವಿಫಲರಾದರೆ ಕೊಹ್ಲಿಯ ಟೆಸ್ಟ್ ನಾಯಕತ್ವದ ಮೇಲೆಯೂ ತೂಗಗತ್ತಿ ತೂಗುವುದು ಖಂಡಿತಾ.