ಕೊಹ್ಲಿ ಒಲ್ಲೆನೆಂದರೂ ಬಿಸಿಸಿಐ ಏಕದಿನ ನಾಯಕತ್ವ ಕಿತ್ತುಕೊಂಡಿತಾ?!
ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಮೇಲೆ ರೋಹಿತ್ ಶರ್ಮಾರನ್ನು ಎರಡೂ ಮಾದರಿಯ ಸೀಮಿತ ಓವರ್ ಗಳ ತಂಡಕ್ಕೆ ನಾಯಕನಾಗಿ ಖಾಯಂ ಆಗಿ ನೇಮಿಸಲು ಬಿಸಿಸಿಐ ಚಿಂತನೆ ನಡೆಸಿತ್ತು. ಈ ಬಗ್ಗೆ ಕೊಹ್ಲಿಗೂ ಸೂಚನೆ ನೀಡಲಾಗಿತ್ತು.
ಆದರೆ ಕೊಹ್ಲಿ ಏಕದಿನ ನಾಯಕತ್ವ ತ್ಯಜಿಸಲು ಮನಸ್ಸು ಮಾಡಲಿಲ್ಲ. ತಾವಾಗಿಯೇ ಕೊಹ್ಲಿ ನಾಯಕತ್ವ ತ್ಯಜಿಸುತ್ತಾರಾ ಎಂದು ಕಾದು ಕುಳಿತಿತ್ತು. ಹಾಗಿದ್ದರೂ ಕೊಹ್ಲಿ ಮೌನವಾಗಿದ್ದರು. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ತಾನಾಗಿಯೇ ಕೊಹ್ಲಿಯನ್ನು ಕೆಳಗಿಳಿಸಿತು ಎನ್ನಲಾಗಿದೆ.