ಕೊಹ್ಲಿ- ಸ್ಟೀವ್ ಸ್ಮಿತ್: ಟೆಸ್ಟ್ ನಲ್ಲಿ ಯಾರು ಬೆಸ್ಟ್?

ಭಾನುವಾರ, 4 ಜೂನ್ 2023 (08:40 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ನ ಸೂಪರ್ ಸ್ಟಾರ್ ಕ್ರಿಕೆಟಿಗರೆಂದರೆ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್. ಇಬ್ಬರೂ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.  ಆ ಪೈಕಿ ಯಾರು ಬೆಸ್ಟ್ ನೋಡೋಣ.

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 24 ಪಂದ್ಯಗಳಿಂದ 1979 ರನ್ ಗಳಿಸಿದ್ದಾರೆ. ಸ್ಮಿತ್ 18 ಪಂದ್ಯಗಳಿಂದ 1887 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ನಲ್ಲಿ 16 ಪಂದ್ಯವಾಡಿರುವ ಕೊಹ್ಲಿ 1,033 ರನ್ ಗಳಿಸಿದ್ದಾರೆ. ಆದರೆ ಸ್ಮಿತ್ ಇಂಗ್ಲೆಂಡ್ ನಲ್ಲಿ ಕೊಹ್ಲಿಗಿಂತ ಉತ್ತಮ ದಾಖಲೆ ಮಾಡಿದ್ದಾರೆ. 16 ಪಂದ್ಯಗಳಿಂದ ಅವರು 1727 ರನ್ ಗಳಿಸಿದ್ದಾರೆ. ಭಾರತದ ವಿರುದ್ಧ ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಯಾವತ್ತೂ ಅತ್ಯುತ್ತಮವಾಗಿ ಆಡುತ್ತಾರೆ. ಹೀಗಾಗಿ ಈ ಇಬ್ಬರು ದಿಗ್ಗಜರ ಪೈಪೋಟಿ ನೋಡಲು ಕ್ರಿಕೆಟ್ ಪ್ರೇಮಿಗಳು ಯಾವತ್ತೂ ಎದಿರು ನೋಡುತ್ತಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ