ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ಕ್ರಿಕೆಟ್ ತಂಡದ ಮಾಲಿಕ ಅರೆಸ್ಟ್

ಬುಧವಾರ, 25 ಸೆಪ್ಟಂಬರ್ 2019 (09:29 IST)
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ವ್ಯಾಪಕ ಬೆಟ್ಟಿಂಗ್ ದಂದೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಿಕ ಅಲಿ ಅಶ್ಪಾಕ್ ತಹ್ರಾರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಕೆಪಿಎಲ್ ಟೂರ್ನಿ ವೇಳೆ ದುಬೈನ ಬುಕಿ ಜತೆ ಅಲಿ ಬೆಟ್ಟಿಂಗ್ ನಡೆಸಿರುವುದು ಖಚಿತವಾಗಿದೆ. ಸತತ ಮೂರು ದಿನಗಳ ವಿಚಾರಣೆ ಬಳಿಕ ಈಗ ಸಿಸಿಬಿ ಪೊಲೀಸರು ಅಲಿ ಅವರನ್ನು ಬಂಧಿಸಿದ್ದಾರೆ.

ಆತನೊಂದಿಗೆ ಸಂಪರ್ಕ ಹೊಂದಿದ್ದ ಆಟಗಾರರು, ಇತರ ತಂಡಗಳ ಮಾಲಿಕರನ್ನೂ ಸಿಸಿಬಿ ವಿಚಾರಣೆಗೊಳಪಡಿಸಲಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೆಎಸ್ ಸಿಎ ತಪ್ಪಿತಸ್ಥರು ಯಾರೇ ಆಗಿರಲಿ, ಅಜೀವ ನಿಷೇಧ ಹೇರಲಾಗುವುದು. ಯಾವುದೇ ಕಾರಣಕ್ಕೂ ನಾವು ಅಕ್ರಮ ಸಹಿಸೋದಿಲ್ಲ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ