ಬೇಡದ ಖ್ಯಾತಿ ಮೈಮೇಲೆಳೆದುಕೊಂಡ ಕ್ರಿಕೆಟಿಗ ಕೃನಾಲ್ ಪಾಂಡ್ಯ

ಗುರುವಾರ, 22 ನವೆಂಬರ್ 2018 (09:00 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

4 ಓವರ್ ಗಳನ್ನು ಎಸೆದ ಪಾಂಡ್ಯ 55 ರನ್ ನೀಡಿ ವಿಕೆಟ್ ಕೀಳಲು ವಿಫಲರಾಗಿದ್ದರು. ಅವರ ಬೌಲಿಂಗ್ ನಲ್ಲಿ ಎದುರಾಳಿಗಳು ಆರು ಸಿಕ್ಸರ್ ಸಿಡಿಸಿದ್ದರು. ಅವರ ಬೌಲಿಂಗ್ ಕಳಪೆಯಾಗಿತ್ತು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕಿಲ್ಲ.

ಕೃನಾಲ್ ಈ ಬೌಲಿಂಗ್ ಸ್ಪೆಲ್ ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಮೂರನೇ ಕಳಪೆ ಬೌಲಿಂಗ್ ಎಂಬ ಕುಖ್ಯಾತಿಗೊಳಗಾಯಿತು. ಲಿಸ್ಟ್ ನಲ್ಲಿ ಮೊದಲ ಹೆಸರು ಯಜುವೇಂದ್ರ ಚಾಹಲ್, ಎರಡನೇ ಸ್ಥಾನ ಜೋಗಿಂದರ್ ಶರ್ಮಾ ಅವರದ್ದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ