ತಿಣುಕಾಡಿ ರನ್ ಗಳಿಸಿದ ಕೃಣಾಲ್ ಪಾಂಡ್ಯಗೆ ನೆಟ್ಟಿಗರ ಟ್ರೋಲ್

ಸೋಮವಾರ, 29 ಮಾರ್ಚ್ 2021 (09:48 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ತಿಣುಕಾಡಿ ತಿಣುಕಾಡಿ ರನ್ ಗಳಿಸಿದ ಕೃಣಾಲ್ ಪಾಂಡ್ಯರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.


ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದ ಕೃನಾಲ್ ದ್ವಿತೀಯ ಏಕದಿನ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ತೃತೀಯ ಏಕದಿನ ಪಂದ್ಯದಲ್ಲಂತೂ ತಿಣುಕಾಡಿ 34 ಎಸೆತಗಳಿಂದ 25 ರನ್ ಗಳಿಸಿದ ಕೃಣಾಲ್ ಪಾಂಡ್ಯರನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.

ತಾವು ಚೆನ್ನಾಗಿ ಆಡಿದಾಗಲೆಲ್ಲಾ ತಂದೆಯನ್ನು ಸ್ಮರಿಸಿಕೊಳ್ಳುವ ಕೃಣಾಲ್, ಈ ಪಂದ್ಯವನ್ನೇನಾದರೂ ಅವರ ತಂದೆ ನೋಡಿದ್ದರೆ ಚೆನ್ನಾಗಿ ಮಂಗಳಾರತಿ ಮಾಡುತ್ತಿದ್ದರು ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಕೆಲವರು ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಡಲು ಯೋಗ್ಯರೇ ಅಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ