ಲಿಯಾಂಡರ್ ಪೇಸ್ಗೆ ಒಲಿಂಪಿಕ್ ಟಿಕೆಟ್, ಬೋಪಣ್ಣ ಜತೆ ಡಬಲ್ಸ್
ಶನಿವಾರ, 11 ಜೂನ್ 2016 (18:56 IST)
ಹಿರಿಯ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಅವರಿಗೆ ರಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಎಐಟಿಎ ಅವಕಾಶ ನೀಡಿದೆ. ಅವರು ರೋಹನ್ ಬೋಪಣ್ಣ ಅವರಿಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಜತೆಗಾರರಾಗಲಿದ್ದಾರೆ. ಸಾಕೇತ್ ಮೈನೇನಿ ತಮ್ಮ ಜತೆಗಾರರಾಗಬೇಕೆಂದು ರೋಹನ್ ಬೋಪಣ್ಣ ಮನವಿಯನ್ನು ಎಐಟಿಎ ತಿರಸ್ಕರಿಸಿದೆ.
ಒಲಿಂಪಿಕ್ಸ್ಗೆ ತಂಡವನ್ನು ಪ್ರಕಟಿಸಿದ ಎಐಟಿಎ ಮುಖ್ಯಸ್ಥ ಅನಿಲ್ ಖನ್ನಾ ಬೋಪಣ್ಣ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜತೆ ಆಡಲಿದ್ದಾರೆಂದು ತಿಳಿಸಿದರು. ಮಹಿಳಾ ಡಬಲ್ಸ್ನಲ್ಲಿ ಸಾನಿಯಾ ಪ್ರಾರ್ಥನಾ ತೊಂಬಾರೆ ಜತೆ ಆಡಲಿದ್ದಾರೆ.
ಮೈನೇನಿ ತಮ್ಮ ಜತೆಗಾರನಾಗಬೇಕೆಂಬ ಬೋಪಣ್ಣ ಅಪೇಕ್ಷೆಯನ್ನು ತಿರಸ್ಕರಿಸಿದ ಎಐಟಿಎ ರಿಯೊದಲ್ಲಿ ಪದಕ ಗಳಿಸುವ ಉತ್ತಮ ಅವಕಾಶವು ಪಯಸ್ ಜತೆಯಾಗಿ ಆಡುವುದರಿಂದ ಸಿಗುತ್ತದೆಂದು ಹೇಳಿದೆ. ಪಯಸ್ ಈ ತಿಂಗಳಾರಂಭದಲ್ಲಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ