ಟಾಸ್ ಸೋಲು, ಶಾರ್ಟ್ ಬಾಲ್ ಅಸಮರ್ಪಕ ಬಳಕೆ ಭಾರತದ ಪತನಕ್ಕೆ ಮುನ್ನುಡಿ

ಶನಿವಾರ, 28 ಮಾರ್ಚ್ 2015 (13:57 IST)
ಒಂದೊಮ್ಮೆ ಆಸ್ಟ್ರೇಲಿಯಾ ಸೆಮಿಫೈನಲ್ಸ್‌ನಲ್ಲಿ ಭಾರತದ ವಿರುದ್ಧ 328 ರನ್ ಬೃಹತ್ ಸ್ಕೋರ್ ಮಾಡಿದ ಬಳಿಕ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಬೃಹತ್ ಮೊತ್ತವನ್ನು ಚೇಸ್ ಮಾಡುವುದು ಕಠಿಣವಾಗಿ ಕಂಡಿತು. ಭಾರತ ಮಿಚೆಲ್ ಸ್ಟಾರ್ಕ್, ಮಿಚೆಲ್ ಜಾನ್ಸನ್, ಹ್ಯಾಜಲ್‌ವುಡ್ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಬೇಕಿತ್ತು. 
 
ಭಾರತೀಯರಿಗೆ ಇದು ನಿಜವಾಗಲೂ ಕೆಟ್ಟ ದಿನವಾಗಿತ್ತು. ಟಾಸ್ ಸೋತಿದ್ದೇ ಭಾರತಕ್ಕೆ ಸೋಲಿನ ಮುನ್ನುಡಿ ಬರೆಯಿತು. ಅಧಿಕ ಒತ್ತಡದ ಪಂದ್ಯದಲ್ಲಿ ಟಾಸ್ ಗೆಲ್ಲುವುದು ಅತ್ಯಂತ ನಿರ್ಣಾಯಕವಾಗಿದೆ. ಅದು ಹೆಚ್ಚಿನ ಒತ್ತಡವನ್ನು ನಿವಾರಿಸುತ್ತದೆ. 
 
 ಭಾರತದ ಬೌಲರುಗಳು ಆಸಿಸ್ ಬೌಲರುಗಳಿಗೆ ಹೋಲಿಸಿದರೆ  ಶಾರ್ಟ್ ಚೆಂಡುಗಳನ್ನು ಸಮರ್ಪಕವಾಗಿ ಬಳಕೆ ಮಾಡಲಿಲ್ಲ. ಭಾರತದ ಓಪನರ್‌ಗಳು ಭದ್ರ ಅಡಿಪಾಯ ಹಾಕಿದರೂ ಮೇಲಿನ ಕ್ರಮಾಂಕದ ಆಟಗಾರರು ಶತಕ ದಾಖಲಿಸಲಿಲ್ಲ. ಇಂತಹ ದೊಡ್ಡ ಚೇಸ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಔಟಾಗದೇ ನಿಂತು ಆಡುವ ಅಗತ್ಯವಿತ್ತು.  ಸ್ಟೀವ್ ಸ್ಮಿತ್ ರೀತಿಯಲ್ಲಿ ಬ್ಯಾಟ್ ಮಾಡುವ ಅಗತ್ಯ ಭಾರತಕ್ಕಿತ್ತು. ಸ್ಟೀವ್ ಸ್ಮಿತ್ ನಾಲ್ಕು ಟೆಸ್ಟ್ ಪಂದ್ಯಗಳಲ್ಲೂ ಶತಕ ದಾಖಲಿಸಿದ್ದು, ಸೆಮಿಫೈನಲ್ ಪಂದ್ಯದಲ್ಲೂ ಮಿಂಚಿದರು.

ಆರಾನ್ ಫಿಂಚ್ ಅವರ ಉತ್ತಮ ಬೆಂಬಲವೂ ಅವರಿಗೆ ಸಿಕ್ಕಿತು.  ಆದರೆ ಭಾರತ ತಂಡಕ್ಕೆ ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ. ಏಳು ಸತತ ಗೆಲುವುಗಳ ನಂತರದ ಸೋಲು ಸಹಜವಾಗಿ ನಿರಾಶೆ ಮೂಡಿಸುತ್ತದೆ. ಆದರೆ ಕ್ರಿಕೆಟ್ ಆಟದ ಸ್ವರೂಪವೇ ಹಾಗಿದ್ದು, ಅಂತ್ಯದಲ್ಲಿ ಉತ್ತಮ ತಂಡ ಗೆಲ್ಲುತ್ತದೆ. ಆದರೆ ಟೀಂ ಇಂಡಿಯಾ ಇದರಿಂದ ಹತಾಶರಾಗಬೇಕಿಲ್ಲ.  ಟೆಸ್ಟ್ ಸರಣಿ ಮತ್ತು ಏಕದಿನಗಳ ನಿರಾಶೆಯ ಪ್ರದರ್ಶನದ ನಂತರ ಪುಟಿದೆದ್ದ ಭಾರತ ಚೇತರಿಸಿಕೊಂಡಿತ್ತು. 

ವೆಬ್ದುನಿಯಾವನ್ನು ಓದಿ