ಮ್ಯಾಚ್ ಫಿಕ್ಸರುಗಳನ್ನು ಆಜೀವ ನಿಷೇಧಿಸಬೇಕು: ಅಲಸ್ಟೈರ್ ಕುಕ್

ಶುಕ್ರವಾರ, 10 ಜೂನ್ 2016 (16:02 IST)
ಯಾರೇ ಮ್ಯಾಚ್ ಫಿಕ್ಸಿಂಗ್‌ನಿಂದ ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಕ್ರಿಕೆಟ್‌ನಿಂದ ಆಜೀವ ನಿಷೇಧ ಹೇರಬೇಕೆಂದು ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಮಾತನಾಡಿದ ಕುಕ್, ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಅವರನ್ನು ಎದುರಿಸುವುದಕ್ಕೆ ತಮಗೆ ಸಮಸ್ಯೆಯೇನೂ ಇಲ್ಲ ಎಂದು ನುಡಿದರು. 2010ರಲ್ಲಿ ಸ್ಪಾಟ್ ಫಿಕ್ಸಿಂಗ್‌ ಹಗರಣದಲ್ಲಿ 5 ವರ್ಷಗಳ ನಿಷೇಧದ ಶಿಕ್ಷೆಯನ್ನು ಮುಗಿಸಿದ ಅಮೀರ್ ಮುಂದಿನ ತಿಂಗಳು ಲಾರ್ಡ್ ಮೈದಾನಕ್ಕೆ ಕಾಲಿಡಲಿದ್ದಾರೆ. 
 
 ಇಂಗ್ಲೆಂಡ್ ಪಾಕ್ ವಿರುದ್ಧ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಇಂಗ್ಲಿಷ್ ಆಟಗಾರರಿಗೆ ಅಮೀರ್ ವಿರುದ್ಧ ಯಾವುದೇ ವೈರತ್ವ ಇಲ್ಲವೆಂದು ಸ್ಟುವರ್ಟ್ ಬ್ರಾಡ್ ತಿಳಿಸಿದರು. ಆದರೆ ಲಾರ್ಡ್ಸ್ ಮೈದಾನದಲ್ಲಿ ನೆರೆದ ಜನರ ಕಥೆ ಭಿನ್ನವಾಗಿರುತ್ತದೆ ಎಂದು ಬ್ರಾಡ್ ಅಭಿಪ್ರಾಯಪಟ್ಟರು. 
 
 ನೀವು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರೆ ಆಜೀವ ನಿಷೇಧ ಹೇರಬೇಕು ಎಂದು ಕುಕ್ ತಿಳಿಸಿದರು.  ನಾವು ಆಟದ ಪ್ರಾಮಾಣಿಕತೆ ರಕ್ಷಿಸಬೇಕಿರುವುದರಿಂದ ಶಿಕ್ಷೆ ಕಠಿಣವಾಗಿರಬೇಕು. ಆದರೆ ಅಮೀರ್ ಪುನಃ ಬರಬಾರದು ಎಂಬ ಅರ್ಥದಲ್ಲಿ ನಾವು ಹೇಳುತ್ತಿಲ್ಲ. ಏಕೆಂದರೆ ನಿಯಮಗಳು ಭಿನ್ನವಾಗಿರುತ್ತದೆ. ಆದರೆ ನನ್ನ ದೃಷ್ಟಿಕೋನದಲ್ಲಿ ಆಟಗಾರರು ಅಂತಹ ಕೃತ್ಯಗಳಿಗೆ ಇಳಿಯುವುದಕ್ಕೆ ಧೃತಿಗೆಡುವಂತೆ ಮಾಡಲು ಶಿಕ್ಷೆ ಕಠಿಣವಾಗಿರಬೇಕು ಎಂದು ಕುಕ್ ಹೇಳಿದರು.
 
  10,000 ಟೆಸ್ಟ್ ರನ್ ಗಡಿಯನ್ನು ದಾಟಿ ದಾಖಲೆ ನಿರ್ಮಿಸಿರುವ ಕುಕ್ 2010ರ ಕುಖ್ಯಾತ ಲಾರ್ಡ್ಸ್ ಟೆಸ್ಟ್‌ನ ಭಾಗವಾಗಿದ್ದರು. ಆ ಸಂದರ್ಭದಲ್ಲಿ ಅಮೀರ್, ಮಹಮ್ಮದ್ ಅಸೀಫ್ ಮತ್ತು ಸಲ್ಮಾನ್ ಬಟ್ ಅವರು ನೋ ಬಾಲ್ ಎಸೆಯಲು ಹಣ ಸ್ವೀಕರಿಸಿದ್ದನ್ನು ಕುಟುಕು ಕಾರ್ಯಾಚರಣೆ ಮೂಲಕ ಬಯಲು ಮಾಡಲಾಗಿತ್ತು.  ಆದಾಗ್ಯೂ ಅಮೀರ್ 5 ವರ್ಷಗಳ ನಿಷೇಧ ಮತ್ತು 6 ತಿಂಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗೆ ಮರಳಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

 
 

ವೆಬ್ದುನಿಯಾವನ್ನು ಓದಿ