ತರಗಲೆಯಂತೆ ವಿಕೆಟ್ ಉರುಳಿದರೂ ಬಂಡೆಯಂತೆ ನಿಂತ ಮಯಾಂಕ್ ಅಗರ್ವಾಲ್

ಶುಕ್ರವಾರ, 28 ಡಿಸೆಂಬರ್ 2018 (12:39 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್‍ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಭಾರೀ ಕುಸಿತ ಕಂಡಿದೆ.


ಒಂದೆಡೆ ವಿಕೆಟ್ ಗಳು ತರಗೆಲೆಯಂತೆ ಉರುಳಿದರೂ ಇನ್ನೊಂದೆಡೆ ಬಂಡೆಯಂತೆ ನಿಂತು ಆಡುತ್ತಿರುವ ಮಯಾಂಕ್ ಅಗರ್ವಾಲ್ ಇದೀಗ 28 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ದಿನದಂತ್ಯಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ. ಮೊದಲ ಇನಿಂಗ್ಸ್ ನಲ್ಲಿ 298 ರನ್ ಗಳ ಮುನ್ನಡೆ ಸೇರಿದಂತೆ ಟೀಂ ಇಂಡಿಯಾ ಇದೀಗ 346 ರನ್ ಗಳ ಒಟ್ಟು ಮುನ್ನಡೆ ಪಡೆದಿದೆ.

ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ ನಲ್ಲಿ ಕೇವಲ 151 ರನ್ ಗಳಿಗೆ ಆಲೌಟ್ ಆಯಿತು. ವೇಗಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿದರು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ಯಾಟ್ ಕ್ಯುಮಿನ್ಸ್ ಮಾರಕ ದಾಳಿ ಸಂಘಟಿಸಿ ಈಗಾಗಲೇ ಕೇವಲ 6 ಓವರ್ ಗಳಲ್ಲಿ 4 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಕೊಹ್ಲಿ, ಪೂಜಾರ ಶೂನ್ಯಕ್ಕೆ ನಿರ್ಗಮಿಸಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಪಿಚ್ ಇದೀಗ ಸಂಪೂರ್ಣವಾಗಿ ಬೌಲರ್ ಗಳಿಗೆ ನೆರವಾಗುತ್ತಿದ್ದು, ಭಾರತಕ್ಕೆ ದೊಡ್ಡ ಇನಿಂಗ್ಸ್ ಮುನ್ನಡೆ ಇರುವುದರಿಂದ ಗೆಲುವಿನ ಅವಕಾಶ ಹೆಚ್ಚಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ