ಮೈದಾನದಲ್ಲಿ ಟಿಮ್ ಪೇಯ್ನ್ ಜತೆ ಕಿತ್ತಾಟ, ಹೊರಗೆ ಅವರ ಮಕ್ಕಳ ಜತೆ ಆಟ: ಇದು ರಿಷಬ್ ಪಂತ್ ವರಸೆ!
ಆಸ್ಟ್ರೇಲಿಯಾ ಪ್ರಧಾನಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರಿಗೆ ನಿನ್ನೆ ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಎರಡೂ ತಂಡಗಳ ಆಟಗಾರರು ಕುಟುಂಬ ಸಮೇತ ಭಾಗವಹಿಸಿದ್ದರು.
ಈ ವೇಳೆ ರಿಷಬ್ ಜತೆಗೆ ಟಿಮ್ ಮಕ್ಕಳು ತುಂಟಾಟವಾಡುವ ಫೋಟೋವನ್ನು ಬೋನೀ ಪೇಯ್ನ್ ಪ್ರಕಟಿಸಿದ್ದಾರೆ. ಈ ವೇಳೆ ಬೋನಿ ಕೂಡಾ ರಿಷಬ್ ಜತೆಗೆ ಪೋಸ್ ನೀಡಿದ್ದಾರೆ.