ಹೆಸರಿಗಷ್ಟೇ ಗವಾಸ್ಕರ್-ಬಾರ್ಡರ್ ಟ್ರೋಫಿ: ಭಾರತ-ಆಸ್ಟ್ರೇಲಿಯಾ ಸರಣಿ ಪ್ರಶಸ್ತಿ ಪ್ರಧಾನಕ್ಕೆ ಗವಾಸ್ಕರ್ ಆಹ್ವಾನವೇ ಇಲ್ಲ?!

ಬುಧವಾರ, 2 ಜನವರಿ 2019 (09:33 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಟೆಸ್ಟ್ ಸರಣಿ ಆಸೀಸ್ ಕ್ರಿಕೆಟ್ ದಿಗ್ಗಜ ಅಲನ್ ಬಾರ್ಡರ್ ಮತ್ತು ಭಾರತೀಯ ದಿಗ್ಗಜ ಸುನಿಲ್ ಗವಾಸ್ಕರ್ ಗೌರವಾರ್ಥ ಬಾರ್ಡರ್-ಗವಾಸ್ಕರ್ ಸರಣಿ ಎಂದೇ ಕರೆಯಲ್ಪಡುತ್ತದೆ.


ಸಾಮಾನ್ಯವಾಗಿ ಈ ಸರಣಿ ಗೆದ್ದ ತಂಡಕ್ಕೆ ಈ ಇಬ್ಬರೂ ದಿಗ್ಗಜ ಕ್ರಿಕೆಟಿಗರು ಜತೆಯಾಗಿ ಸೇರಿಕೊಂಡು ಪ್ರಶಸ್ತಿ ಕೊಡುವುದು ಅಂದಿನಿಂದಲೂ ನಡೆದುಕೊಂಡ ಪದ್ಧತಿ. ಆದರೆ ಈ ಬಾರಿ ಸುನಿಲ್ ಗವಾಸ್ಕರ್ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಮುಗಿದ ಬಳಿಕ ನಡೆಯಲಿರುವ ಪ್ರಶಸ್ತಿ ಸಮಾರಂಭಕ್ಕೆ ತೆರಳುತ್ತಿಲ್ಲ.

ಅದಕ್ಕೆ ಕಾರಣ, ಕ್ರಿಕೆಟ್ ಆಸ್ಟ್ರೇಲಿಯಾ ಸುನಿಲ್ ಗವಾಸ್ಕರ್ ಸೂಕ್ತ ಸಮಯಕ್ಕೆ ಆಹ್ವಾನ ಪತ್ರಿಕೆ ನೀಡದೇ ಇರುವುದು. ಒಂದು ವೇಳೆ ಸರಣಿ ಆರಂಭಕ್ಕೂ ಮೊದಲು ಆಹ್ವಾನ ಬಂದಿದ್ದರೆ ಅಲ್ಲಿಗೆ ತೆರಳುತ್ತಿದ್ದೆ. ಆದರೆ ಈಗ ಕಾಮೆಂಟೇಟರ್ ಕರ್ತವ್ಯವನ್ನೂ ನಿಭಾಯಿಸುತ್ತಿರುವುದರಿಂದ ಆ ಕರ್ತವ್ಯ ಬಿಟ್ಟು ಸಿಡ್ನಿಗೆ ಹೋಗಲು ಕಷ್ಟ. ಹೀಗಾಗಿ ಪ್ರಶಸ್ತಿ ಸಮಾರಂಭಕ್ಕೆ ಹೋಗುತ್ತಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ. ಹೀಗಾಗಿ ಸಿಡ್ನಿಯಲ್ಲಿ ಸರಣಿ ಗೆದ್ದ ನಾಯಕನಿಗೆ ಅಲನ್ ಬಾರ್ಡರ್ ಏಕಾಂಗಿಯಾಗಿ ಟ್ರೋಫಿ ಹಸ್ತಾಂತರಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ