ಮಾನಸಿಕವಾಗಿ ಸುಸ್ತು: ಇಶಾನ್ ಕಿಶನ್ ಬ್ರೇಕ್ ಗೆ ಕಾರಣ ಬಯಲು
ಶನಿವಾರ, 23 ಡಿಸೆಂಬರ್ 2023 (13:40 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಕೊನೆಯ ಕ್ಷಣದಲ್ಲಿ ಹೊರಬಂದಿದ್ದರು.
ಕೌಟುಂಬಿಕ ಕಾರಣ ನೀಡಿ ಇಶಾನ್ ತವರಿಗೆ ಮರಳಿದ್ದರು. ಆದರೆ ಟೆಸ್ಟ್ ಸರಣಿಗೆ ಕೌಟುಂಬಿಕ ಕಾರಣ ನೀಡಿ ಗೈರಾದಾಗ ಏನಾದರೂ ಸಮಸ್ಯೆಯಾಗಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ಅವರು ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಟೀಕೆ ಮಾಡಿದ್ದರು. ಟೀಂ ಇಂಡಿಯಾಗಿಂತಲೂ ರಿಯಾಲಿಟಿ ಶೋ ಹೆಚ್ಚಾಯ್ತಾ ಎಂದು ಪ್ರಶ್ನಿಸಿದ್ದರು.
ಆದರೆ ಕ್ರಿಕೆಟ್ ನಿಂದ ಬ್ರೇಕ್ ಪಡೆಯುವುದಕ್ಕೆ ಮಾನಸಿಕವಾಗಿ ಸುಸ್ತಾಗಿರುವುದೇ ಕಾರಣ ಎಂದು ಇದೀಗ ತಿಳಿದುಬಂದಿದೆ. ಏಕದಿನ ವಿಶ್ವಕಪ್, ಆಸ್ಟ್ರೇಲಿಯಾ, ದ.ಆಫ್ರಿಕಾ ಟಿ20 ಸರಣಿ ಸೇರಿದಂತೆ ಇಶಾನ್ ಕಳೆದ ಮೂರು-ನಾಲ್ಕು ತಿಂಗಳಿನಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರು ಮಾನಸಿಕವಾಗಿ ಕುಗ್ಗಿದ್ದು, ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.