Dhoni Fan Gril: ಧೋನಿ ಔಟಾಗಿದ್ದಕ್ಕೆ ಈ ಯುವತಿ ಕೊಟ್ಟ ರಿಯಾಕ್ಷನ್ ವೈರಲ್
ರಾಜಸ್ಥಾನ್ ನೀಡಿದ್ದ 183 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಸಿಎಸ್ ಕೆ 20 ಓವರ್ ಗಳಲ್ಲಿ 176 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 6 ರನ್ ಗಳಿಂದ ಸೋತಿತು. ಇದಕ್ಕೆ ಕಾರಣ ಧೋನಿ ವೈಫಲ್ಯ ಎನ್ನುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
19.1 ನೇ ಓವರ್ ನಲ್ಲಿ 11 ಎಸೆತಗಳಿಂದ 16 ರನ್ ಗಳಿಸಿದ್ದ ಧೋನಿ ಔಟಾದರು. ಒಂದು ವೇಳೆ ಧೋನಿ ಕ್ರೀಸ್ ನಲ್ಲಿದ್ದಿದ್ದರೆ ಪಂದ್ಯ ಗೆಲ್ಲುತ್ತಿತ್ತು ಎಂಬುದು ಅಭಿಮಾನಿಗಳ ಅಭಿಮತ. ಅಲ್ಲದೆ, ಇನ್ನೊಂದು ತುದಿಯಲ್ಲಿ ಜಡೇಜಾ ಇದ್ದರು. ಅವರೂ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. ಸಿಎಸ್ ಕೆ ಗೆಲುವಿಗೆ ಅವರು ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಅದನ್ನು ಧೋನಿ ಬಳಸಲಿಲಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿತ್ತು.
ಧೋನಿ ಔಟಾದ ತಕ್ಷಣ ಆಘಾತಕ್ಕೊಳಗಾದ ಅಭಿಮಾನಿಯೊಬ್ಬರು ಥೋ... ಎನ್ನುವಂತೆ ಕೈ ಸನ್ನೆ ಮಾಡಿ ಆಘಾತ ವ್ಯಕ್ತಪಡಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಚ್ಚು ಕಡಿಮೆ ಎಲ್ಲಾ ಧೋನಿ ಅಭಿಮಾನಿಗಳ ಭಾವನೆಯೂ ಈಗ ಇದೇ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.