ಟಿ20 ವಿಶ್ವಕಪ್: ಸೆಮಿಫೈನಲ್ ಗೆ ಮುನ್ನ ಪಾಕ್ ಆಟಗಾರರಿಗೆ ಜ್ವರ ತಂದ ಆತಂಕ
ಹಿರಿಯ ಕ್ರಿಕೆಟಿಗ ಶೊಯೇಬ್ ಮಲಿಕ್, ಆರಂಭಿಕ ಮೊಹಮ್ಮದ್ ರಿಜ್ವಾನ್ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಇಬ್ಬರ ಕೊರೋನಾ ವರದಿ ನೆಗೆಟಿವ್ ಬಂದಿದೆ. ಇದೀಗ ಇಬ್ಬರೂ ಆಡಲು ಫಿಟ್ ಎಂದು ವೈದ್ಯಕೀಯ ತಂಡ ಘೋಷಿಸಿದೆ.
ಜ್ವರದಿಂದಾಗಿ ಇಬ್ಬರೂ ಆಟಗಾರರೂ ನಿನ್ನೆಯ ಅಭ್ಯಾಸಕ್ಕೆ ಗೈರಾಗಿದ್ದರು. ಆದರೆ ಇಂದು ಆಟಕ್ಕೆ ಮುನ್ನ ಇಬ್ಬರೂ ಫಿಟ್ ಎಂದು ಘೋಷಿಸಲಾಗಿದೆ.