ಮೊಹಮ್ಮದ್ ಶಮಿ ಕಮ್ ಬ್ಯಾಕ್, ಸಿರಾಜ್ ಗೆ ರೆಸ್ಟ್?
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ಮುಂದಿನ ಟೆಸ್ಟ್ ಗೆದ್ದರೆ ಮಾತ್ರ ಟೀಂ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಲು ಸಾಧ್ಯವಿದೆ.
ಹೀಗಾಗಿ ಟೀಂ ಇಂಡಿಯಾ ಆಡುವ ಬಳಗದಲ್ಲಿ ಬದಲಾವಣೆಯಾಗಲಿದೆ. ಕಳೆದ ಪಂದ್ಯದಲ್ಲಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿತ್ತು. ಕೊನೆಯ ಪಂದ್ಯಕ್ಕೆ ಶಮಿ ಪುನರಾಗಮನವಾಗಲಿದ್ದು, ಮುಂದಿನ ಏಕದಿನ ಸರಣಿಯಲ್ಲಿ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಅಕ್ಸರ್ ಪಟೇಲ್ ಇದುವರೆಗೆ ಬೌಲಿಂಗ್ ನಲ್ಲಿ ಹೆಚ್ಚು ಪರಿಣಾಮ ಬೀರದೇ ಇದ್ದರೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಲ ನೀಡುತ್ತಾರೆ. ಹೀಗಾಗಿ ಅವರಿಗೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆಯಿದೆ.