ಕೊಹ್ಲಿ ಮನೆಗೆ ಬಂದಿದ್ದು ಅತೀ ದೊಡ್ಡ ಸರ್ಪೈಸ್: ಮೊಹ್ಮದ್ ಸಿರಾಜ್

ಶುಕ್ರವಾರ, 18 ಫೆಬ್ರವರಿ 2022 (16:58 IST)
ಹೈದರಾಬಾದ್: ಆರ್ ಸಿಬಿ ಪರ ಐಪಿಎಲ್ ಆಡುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಜೀವನದ ಅತ್ಯಂತ ದೊಡ್ಡ ಸರ್ಪೈಸ್ ವಿರಾಟ್ ಕೊಹ್ಲಿ ತಮ್ಮ ಮನೆಗೆ ಬಂದಿದ್ದು ಎಂದಿದ್ದಾರೆ.

ಈ ಹಿಂದೆ ಸಿರಾಜ್ ಹೈದರಾಬಾದ್ ನಲ್ಲಿ ಐಪಿಎಲ್ ಪಂದ್ಯ ನಡೆಯುವಾಗ ಆರ್ ಸಿಬಿ ಆಟಗಾರರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಈ ಕ್ಷಣಗಳನ್ನು ಸಿರಾಜ್ ನೆನೆಸಿಕೊಂಡಿದ್ದಾರೆ.

‘ಆರ್ ಸಿಬಿ ಆಟಗಾರರನ್ನು ಡಿನ್ನರ್ ಗೆ ಮನೆಗೆ ಆಹ್ವಾನಿಸಿದ್ದೆ. ವಿರಾಟ್ ಕೊಹ್ಲಿಗೆ ಆಹ್ವಾನಿಸಿದಾಗ ನನಗೆ ಸ್ವಲ್ಪ ಬೆನ್ನು ನೋವಿದೆ. ಬರೋದಿಲ್ಲ ಎಂದಿದ್ದರು. ನನಗೆ ನಿರಾಸೆಯಾದರೂ ನೀವು ವಿಶ್ರಾಂತಿ ತೆಗೆದುಕೊಳ್ಳಿ ಎಂದೆ. ಆದರೆ ಎಲ್ಲರೂ ಮನೆಗೆ ಬಂದಾಗ ಅವರ ಜೊತೆ ಕೊಹ್ಲಿ ಕೂಡಾ ಕಾರಿನಿಂದ ಇಳಿಯುವುದನ್ನು ಕಂಡೆ. ನನಗೆ ಖುಷಿ ತಡೆಯಲಾಗದೇ ಹೋಗಿ ಅಪ್ಪಿಕೊಂಡೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಸರ್ಪೈಸ್ ಆಗಿತ್ತು’ ಎಂದು ಸಿರಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.






















ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ