ವಿರಾಟ್ ಕೊಹ್ಲಿ ಹೊಗಳಿ ರೋಹಿತ್ ಶರ್ಮಾ ವಿರುದ್ಧ ಕಿಡಿ ಕಾರಿದ ಮೊಹಮ್ಮದ್ ಸಿರಾಜ್

Krishnaveni K

ಶುಕ್ರವಾರ, 21 ಮಾರ್ಚ್ 2025 (12:10 IST)
ಮುಂಬೈ: ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ತಂಡದಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಮೇಲೆ ಅಸಮಾಧಾನ ಹೊರಹಾಕಿರುವ ವೇಗಿ ಮೊಹಮ್ಮದ್ ಸಿರಾಜ್, ಇನ್ನೊಂದೆಡೆ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಸಿರಾಜ್ ರನ್ನು ಕಡೆಗಣಿಸಿ ಅರ್ಷ್ ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಮಣೆ ಹಾಕಲಾಗಿತ್ತು. ಇದರ ಬಗ್ಗೆ ವಿವರಣೆ ನೀಡಿದ್ದ ರೋಹಿತ್ ಶರ್ಮಾ ಹಳೆಯ ಚೆಂಡಿನಲ್ಲಿ ಸಿರಾಜ್ ಅಷ್ಟು ಪ್ರಬಲರಲ್ಲ ಎನ್ನುವ ಕಾರಣಕ್ಕೆ ಹೊರಗಿಡಲಾಗಿದೆ ಎಂದಿದ್ದರು.

ಆದರೆ ಈಗ ರೋಹಿತ್ ಮಾತಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವ ಸಿರಾಜ್ ‘ನಾನು ಹೆಚ್ಚು ವಿಕೆಟ್ ಪಡೆದಿರುವುದು ಹಳೆಯ ಚೆಂಡಿನಲ್ಲೇ ಮತ್ತು ವಿಶ್ವದ ಟಾಪ್ 10 ಬೌಲರ್ ಗಳಲ್ಲಿ ಒಬ್ಬನಾಗಿದ್ದೇನೆ. ನನ್ನ ಎಕಾನಮಿ ರೇಟ್ ಕೂಡಾ ಕಡಿಮೆಯಿತ್ತು. ಅಂಕಿ ಅಂಶಗಳೇ ನನ್ನ ಸಾಧನೆಯನ್ನು ಹೇಳುತ್ತವೆ’ ಎಂದಿದ್ದಾರೆ.

ಇನ್ನು ರೋಹಿತ್ ವಿರುದ್ಧ ಅಸಮಾಧಾನ ಹೊರಹಾಕಿರುವ ಸಿರಾಜ್, ಕೊಹ್ಲಿಯನ್ನು ಹೊಗಳಿದ್ದಾರೆ. ನನ್ನ ಕಷ್ಟದ ಸಮಯದಲ್ಲೆಲ್ಲಾ ನನಗೆ ಬೆಂಬಲವಾಗಿ ನಿಂತಿದ್ದು ವಿರಾಟ್ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ