IPL 2025: ಆರ್ ಸಿಬಿಯಲ್ಲಿ ಈ ಬಾರಿ ಈ ಸಲ ಕಪ್ ನಮ್ದೇ ಘೋಷಣೆ ಕೇಳಿಸಲ್ಲ: ಎಲ್ಲದಕ್ಕೂ ಕೊಹ್ಲಿಯೇ ಕಾರಣ

Krishnaveni K

ಬುಧವಾರ, 19 ಮಾರ್ಚ್ 2025 (12:28 IST)
ಬೆಂಗಳೂರು: ಪ್ರತೀ ಬಾರಿ ಐಪಿಎಲ್ ಟೂರ್ನಿಯಲ್ಲೂ, ಆಟಗಾರರು ಎಲ್ಲೇ ಹೋದರೂ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ಘೋಷ ವಾಕ್ಯದೊಂದಿಗೇ ಟೂರ್ನಿ ಆರಂಭಿಸುತ್ತಾರೆ. ಆದರೆ ಈ ಬಾರಿ ಈ ಸಲ ಕಪ್ ನಮ್ದೇ ಘೋಷಣೆ ಕೇಳಲ್ಲ. ಎಲ್ಲದಕ್ಕೂ ಕೊಹ್ಲಿಯೇ ಕಾರಣ ಎನ್ನಬಹುದು.

ಈ ಸಲ ಕಪ್ ನಮ್ದೇ ಎಂದು 17 ಸೀಸನ್ ಮುಗಿದೇ ಹೋಗಿದೆ. ಇದುವರೆಗೆ ಆರ್ ಸಿಬಿಗೆ ಕಪ್ ಗೆಲ್ಲಲು ಸಾಧ್ಯವೇ ಆಗಿಲ್ಲ. ಆರ್ ಸಿಬಿಗೆ ಒಂದಾದರೂ ಕಪ್ ಗೆಲ್ಲಿಸಿಕೊಡಬೇಕು ಎಂದು ಕೊಹ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಇದುವರೆಗೆ ಸಾಧ್ಯವಾಗಿಲ್ಲ ಎಂಬ ಬೇಸರ ಅವರಲ್ಲಿದೆ.

ಈ ಸಾರಿಯಾದರೂ ಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಈ ಬಾರಿ ಹೊಸ ನಾಯಕತ್ವದಲ್ಲಿ, ಆಲ್ ರೌಂಡರ್ ಗಳ ಪಡೆಯೇ ಕಟ್ಟಿಕೊಂಡು ಆರ್ ಸಿಬಿ ಕಪ್ ಗೆಲ್ಲಬಹುದು ಎಂಬ ವಿಶ್ವಾಸವಿದೆ. ಆದರೆ ಎಲ್ಲೂ ಈ ಸಲ ಕಪ್ ನಮ್ದೇ ಎಂಬ ಹೇಳಿಕೆ ನೀಡದಂತೆ ಕೊಹ್ಲಿ ಹೇಳಿದರಂತೆ.

ಈ ಸಲ ಯಾರೂ ಈ ಸಲ ಕಪ್ ನಮ್ದೇ ಎಂದು ಬಳಸಬಾರದು ಎಂದು ಎಬಿಡಿ ವಿಲಿಯರ್ಸ್ ಬಳಿ ಕಟ್ಟುನಿಟ್ಟಾಗಿ ಕೊಹ್ಲಿ ಹೇಳಿದ್ದಾರಂತೆ. ಹೀಗಾಗಿ ಈ ಬಾರಿ ಎಲ್ಲೂ ಈ ಸಲ ಕಪ್ ನಮ್ದೇ ಎಂಬ ಮಾತು ಕೇಳಿಬರುತ್ತಿಲ್ಲ. ಈ ಬಾರಿ ಹೇಳದೇ ಕಪ್ ಹೊಡೆಯಲು ಕೊಹ್ಲಿ ಪ್ಲ್ಯಾನ್ ಮಾಡಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ