ಬೆಂಗಳೂರು: ಐಪಿಎಲ್ 2025 ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕರಾಗಿ ವಿರಾಟ್ ಕೊಹ್ಲಿ ಜೊತೆ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ವಿರಾಟ್ ಕೊಹ್ಲಿ ಕಳೆದ ಕೆಲವು ಆವೃತ್ತಿಗಳಿಂದ ಐಪಿಎಲ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಈ ಬಾರಿಯೂ ಅವರು ಆರಂಭಿಕರಾಗಿಯೇ ಕಣಕ್ಕಿಳಿಯಲಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಅವರ ಜೊತೆಗಿದ್ದ ಆಟಗಾರರು ಈಗ ತಂಡದಲ್ಲಿಲ್ಲ. ಹೀಗಾಗಿ ಕೊಹ್ಲಿ ಹೊಸ ಜೊತೆಗಾರನೊಂದಿಗೆ ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಕೊಹ್ಲಿಗೆ ಆರಂಭಿಕರಾಗಿ ಸಾಥ್ ನೀಡುವವರು ಫಿಲ್ ಸಾಲ್ಟ್. ಈ ಬಾರಿ ಮೆಗಾ ಹರಾಜಿನಲ್ಲಿ ಆರ್ ಸಿಬಿ ಫಿಲ್ ಸಾಲ್ಟ್ ರನ್ನು ಖರೀದಿ ಮಾಡಿತ್ತು. ಹೀಗಾಗಿ ಕೊಹ್ಲಿ ಜೊತೆ ಅವರೇ ಆರಂಭಿಕರಾಗುವುದು ಪಕ್ಕಾ ಆಗಿದೆ.
ಈ ಬಾರಿ ಆರ್ ಸಿಬಿಯಲ್ಲಿ ಹೊಸ ತಾರೆಗಳು ಸೇರ್ಪಡೆಯಾಗಿದ್ದಾರೆ. ನಾಯಕ ರಜತ್ ಪಟಿದಾರ್ ಮೂರನೇ ಕ್ರಮಾಂಕದಲ್ಲಿ, ಲಿವಿಂಗ್ ಸ್ಟೋನ್ ನಾಲ್ಕನೇ ಕ್ರಮಾಂಕದಲ್ಲಿ, ಜಿತೇಶ್ ಶರ್ಮ ಐದನೇ ಕ್ರಮಾಂಕದಲ್ಲಿ, ಟಿಮ್ ಡೇವಿಡ್ ಆರು ಮತ್ತು ಕೃನಾಲ್ ಪಾಂಡ್ಯ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಲಿದ್ದಾರೆ. ಹೀಗಾಗಿ ಈ ಬಾರಿ ಆರ್ ಸಿಬಿ ಬ್ಯಾಟಿಂಗ್ ಸದೃಢವೆನಿಸುತ್ತಿದೆ.